June 28, 2026
Sunday, June 28, 2026
spot_img

‘ಎಲಿವೇಟೆಡ್ ಕಾರಿಡಾರ್‌ಗಳಿಗೆ ಬ್ರೇಕ್?’ | DPR ಬಗ್ಗೆ ಜನಸಾಮಾನ್ಯರಿಗೂ ಗೊತ್ತಾಗಲಿ: ತೇಜಸ್ವಿ ಸೂರ್ಯ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಪ್ರಸ್ತಾಪವಾಗಿರುವ ಎಲಿವೇಟೆಡ್ ಕಾರಿಡಾರ್ ಮತ್ತು ಫ್ಲೈಓವರ್ ಯೋಜನೆಗಳ ಕುರಿತು ಇದೀಗ ರಾಜಕೀಯ ಚರ್ಚೆ ಜೋರಾಗಿದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಈ ಯೋಜನೆಗಳನ್ನು ಜನರ ಮುಂದೆ ಪಾರದರ್ಶಕವಾಗಿ ಇಡಬೇಕು ಎಂದು ಆಗ್ರಹಿಸಿದ್ದಾರೆ. ಯೋಜನೆಗಳಿಗೆ ಸಂಬಂಧಿಸಿದ ಸಂಪೂರ್ಣ ವರದಿಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡದೇ ಮುಂದುವರಿಯುತ್ತಿರುವ ಕ್ರಮದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಪಿಆರ್ ಬಹಿರಂಗಕ್ಕೆ ಆಗ್ರಹ

ಈ ಸಂಬಂಧ ಬಿ-ಸ್ಮೈಲ್ ಅಧಿಕಾರಿಗಳಿಗೆ ಪತ್ರ ಬರೆದಿರುವ ಸಂಸದರು, ಮಿನರ್ವ ಸರ್ಕಲ್‌, ಹಡ್ಸನ್ ಸರ್ಕಲ್‌, ಸಿಲ್ಕ್ ಬೋರ್ಡ್‌, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಭಾಗಗಳಲ್ಲಿ ನಿರ್ಮಾಣಗೊಳ್ಳಲಿರುವ ಎಲಿವೇಟೆಡ್ ಕಾರಿಡಾರ್‌ಗಳ ಬಗ್ಗೆ ಸಾರ್ವಜನಿಕ ಸಮಾಲೋಚನೆ ಅಗತ್ಯ ಎಂದು ತಿಳಿಸಿದ್ದಾರೆ. ಸಾವಿರಾರು ಕೋಟಿ ವೆಚ್ಚದ ಯೋಜನೆಗಳ ವಿವರಗಳು ಜನರಿಗೆ ತಿಳಿದಿರಬೇಕು ಎಂದಿದ್ದಾರೆ.

ಇದನ್ನೂ ಓದಿ:

ವೈಜ್ಞಾನಿಕ ಯೋಜನೆಯೇ?

ಬಿಎಂಎಲ್‌ಟಿಎ ಅನುಮೋದನೆ ಸಿಕ್ಕಿದೆಯೇ ಎಂಬುದರ ಬಗ್ಗೆ ಕೂಡ ಅವರು ಪ್ರಶ್ನೆ ಎತ್ತಿದ್ದಾರೆ. ವೈಜ್ಞಾನಿಕ ಸಂಚಾರ ಅಧ್ಯಯನವಿಲ್ಲದೆ ಫ್ಲೈಓವರ್ ನಿರ್ಮಿಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಗಿಗುಡ್ಡ ಫ್ಲೈಓವರ್ ಉದಾಹರಣೆ

ರಾಗಿಗುಡ್ಡ ಫ್ಲೈಓವರ್ ಸಂಚಾರ ದಟ್ಟಣೆ ಕಡಿಮೆ ಮಾಡುವ ಬದಲು ಬೇರೆ ಜಂಕ್ಷನ್‌ಗೆ ಸಮಸ್ಯೆ ತಳ್ಳಿದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ದೊಡ್ಡ ಯೋಜನೆಗಳ ಮೊದಲು ಜನರು, ತಜ್ಞರು ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !