ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕೆನಡಾದ ಆರು ಹಿರಿಯ ರಾಜತಾಂತ್ರಿಕರನ್ನ ಹೊರಹಾಕುವುದಾಗಿ ಘೋಷಿಸಿದೆ.
2024ರ ಅಕ್ಟೋಬರ್ 19ರ ಶನಿವಾರ ರಾತ್ರಿ 11:59 ರವರೆಗೆ ಭಾರತ ದೇಶವನ್ನು ತೊರೆಯಲು ಕಾಲಾವಕಾಶ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ಹೊರಹೋಗಲು ಆದೇಶಿಸಲಾದ ರಾಜತಾಂತ್ರಿಕರಲ್ಲಿ ಹಂಗಾಮಿ ಹೈಕಮಿಷನರ್ ಸ್ಟೀವರ್ಟ್ ರಾಸ್ ವೀಲರ್, ಉಪ ಹೈಕಮಿಷನರ್ ಪ್ಯಾಟ್ರಿಕ್ ಹೆಬರ್ಟ್ ಮತ್ತು ನಾಲ್ವರು ಪ್ರಥಮ ಕಾರ್ಯದರ್ಶಿ ಮೇರಿ ಕ್ಯಾಥರೀನ್ ಜೋಲಿ, ಇಯಾನ್ ರಾಸ್ ಡೇವಿಡ್ ಟ್ರೈಟ್ಸ್, ಆಡಮ್ ಜೇಮ್ಸ್ ಚುಯಿಪ್ಕಾ ಮತ್ತು ಪೌಲಾ ಒರ್ಜುಯೆಲಾ ಸೇರಿದ್ದಾರೆ.
ಈಗಾಗಲೇ ಕೇಂದ್ರ ಸರಕಾರ ಕೆನಡಾದ ಒಟ್ಟಾವಾದಲ್ಲಿನ ತನ್ನ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಇತರ ಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಾಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿದೆ.