BREAKING NEWS : CBSE 10, 12ನೇ ತರಗತಿ ‘ಬೋರ್ಡ್ ಪರೀಕ್ಷೆ’ಗಳ ವೇಳಾಪಟ್ಟಿ ಬಿಡುಗಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) ಇಂದು 2023ರ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿ ಬಿಡುಗಡೆ ಮಾಡಿದೆ. ವಿವರವಾದ ಬೋರ್ಡ್ ಶೀಟ್ ಈಗ ಅಧಿಕೃತ ಸಿಬಿಎಸ್‌ಇ ವೆಬ್ ಸೈಟ್ cbse.gov.in ನಲ್ಲಿ ಲಭ್ಯವಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ, 10ನೇ ತರಗತಿಗೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳು 2023ರ ಫೆಬ್ರವರಿ 15 ರಿಂದ ಮಾರ್ಚ್ 21ರಂದು ಕೊನೆಗೊಳ್ಳುತ್ತವೆ. ಅಂತೆಯೇ, 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 5 ರ ನಡುವೆ ನಡೆಯಲಿವೆ.

ಅಭ್ಯರ್ಥಿಗಳು cbse.gov.in ಸಿಬಿಎಸ್‌ಇ ಡೇಟ್ ಶೀಟ್ ಪಿಡಿಎಫ್ ಲಿಂಕ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!