ಹೊಸ ದಿಗಂತ ಡಿಜಿಟಲ್ ಡೆಸ್ಕ್
ಇಮ್ರಾನ್ ಖಾನ್ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಹಾಗಾಗಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನನ್ನು ಕೊಲ್ಲಲು ಬಂದಿದ್ದೇನೆ’ ಎಂದು ಶೂಟರ್ ಹೇಳಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಮ್ರಾನ್ ಖಾನ್ ಅವರು ಹಠಾತ್ ಚುನಾವಣೆಗೆ ಒತ್ತಾಯಿಸಿ ಇಸ್ಲಾಮಾಬಾದ್’ಗೆ ಪ್ರತಿಭಟನಾ ಮೆರವಣಿಗೆ ಮುನ್ನಡೆಸುತ್ತಿದ್ದರು.
ಗುಜ್ರಾನ್ವಾಲಾದ ಅಲ್ಲಾವಾಲಾ ಚೌಕ್ನಲ್ಲಿರುವ ಇಮ್ರಾನ್ ಖಾನ್ ಅವರ ಸ್ವಾಗತ ಶಿಬಿರದ ಬಳಿ ಗುಂಡಿನ ದಾಳಿ ನಡೆದ ನಂತರ ಗೊಂದಲದ ದೃಶ್ಯಗಳು ಭುಗಿಲೆದ್ದಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.