ಭಾರತವನ್ನು ಸೋಲಿಸಿದರೆ ‘ಜಿಂಬಾಬ್ವೆ’ ಹುಡುಗನ ಜೊತೆ ಮದುವೆ: ಪಾಕ್ ನಟಿ ಸೆಹರ್ ಶಿನ್ವಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 6 ರಂದು ನಡೆಯುವ ಜಿಂಬಾಬ್ವಿ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಜಿಂಬಾಬ್ವೆ ತಂಡ ಮಣಿಸಿದರೆ ಆ ದೇಶದ ವ್ಯಕ್ತಿಯನ್ನು ಮದುವೆಯಾಗುವುದಾಗಿ ಪಾಕ್ ನಟಿ ಸೆಹರ್ ಶಿನ್ವಾರಿ ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹರ್ ಶಿನ್ವಾರಿ, ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ಭಾರತವನ್ನು ಸೋಲಿಸಿದರೆ, ನಾನು ಆ ದೇಶದ ಪ್ರಜೆಯನ್ನು ಮದುವೆಯಾಗುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಸೂಪರ್ 12ರ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿರುವ ರೋಹಿತ್ ಸೇನಾ ಆ ಪಂದ್ಯದಲ್ಲಿ ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲಿದೆ. ಈ ನಡುವೆ ಟೀಂ ಇಂಡಿಯಾವನ್ನು ಈ ಹಿಂದೆ ಹಲವು ಬಾರಿ ಟೀಕಿಸಿದ್ದ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಮತ್ತೊಮ್ಮೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

ಈ ಹಿಂದೆ ಸಾಕಷ್ಟು ಬಾರಿ ಈ ಪಾಕಿಸ್ತಾನಿ ನಟಿ ಟೀಮ್ ಇಂಡಿಯಾವನ್ನು ವಿವಾದಾತ್ಮಕ ಪೋಸ್ಟ್‌ಗಳ ಮೂಲಕ ಟೀಕಿಸುವುದರೊಂದಿಗೆ ಸುದ್ದಿಯಲ್ಲಿದ್ದರು. ನಿನ್ನೆಯ ಬಾಂಗ್ಲಾದೇಶ-ಭಾರತ ಪಂದ್ಯದ ವೇಳೆ ರೋಹಿತ್ ತಂಡ ಸೋಲಬೇಕು ಎಂದು ಪದೇ ಪದೇ ಟ್ವೀಟ್ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!