ಹೊಸದಿಗಂತ ಡಿಜಿಟಲ್ ಡೆಸ್ಕ್;
ಐಪಿಎಲ್ ಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಪ್ರೇಮಿಗಳ ದಿನದಂದು ತಮ್ಮ ಹೊಸ ಗರ್ಲ್ ಫ್ರೆಂಡ್ ಜೊತೆಗಿನ ವಿಡಿಯೋವನ್ನು ಕೂಡ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.ಈ ಮೂಲಕ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಜೊತೆಗಿನ ಬ್ರೇಕಪ್ ಅನ್ನು ಕನ್ಫಾರ್ಮ್ ಮಾಡಿದ್ದಾರೆ.
ಲಲಿತ್ ಮೋದಿ ತಮ್ಮ ಸಂಗಾತಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಅವರು ಅವರೊಂದಿಗಿನ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 25 ವರ್ಷಗಳ ಸ್ನೇಹ ಈಗ ಪ್ರೀತಿ-ಸಂಬಂಧವಾಗಿ ಬದಲಾದಂತೆ ಕಾಣ್ತುದೆ.
ಲಲಿತ್ ಮೋದಿ 1991ರಲ್ಲಿ ಮಿನಲ್ ಮೋದಿ ಅವರನ್ನು ವಿವಾಹವಾಗಿದ್ದರು. ಆದ್ರೆ ಮಿನಲ್ ಅವರು 2018 ರಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ರು. ಪತ್ನಿ ನಿಧನದ ನಂತರ ಲಲಿತ್ ಮೋದಿ ಅವರು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಸ್ನೇಹ ಬೆಳೆಸಿದ್ರು. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ.
ಇದೀಗ ಸುಶ್ಮಿತಾ ಸೇನ್ ಜೊತೆ ಬ್ರೇಕಪ್ ಮಾಡಿಕೊಂಡ ಲಲಿತ್ ಮೋದಿ ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿಯೊಂದಿಗೆ ವಿಡಿಯೊ ಮಾಂಟೇಜ್ ಹಂಚಿಕೊಂಡ ‘ಅದೃಷ್ಟವಂತರು – ಹೌದು’ ಎಂದು ಬರೆದಿದ್ದಾರೆ. ಆದರೆ ನನಗೆ ಎರಡು ಬಾರಿ ಅದೃಷ್ಟ ಸಿಕ್ಕಿತು. 25 ವರ್ಷಗಳ ಸ್ನೇಹ ಪ್ರೀತಿಗೆ ತಿರುಗಿದಾಗ. ಇದು ನಿಮ್ಮೆಲ್ಲರಿಗೂ ಕೂಡ ಆಗಲಿ ಎಂದು ಆಶಿಸುತ್ತೇನೆ. ನಿಮ್ಮೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಬರೆದಿದ್ದಾರೆ.
ಈ ಹಿಂದೆ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಮಾಲ್ಡೀವ್ಸ್ ವೆಕೇಷನ್ ಫೋಟೋಗಳನ್ನು ಹಂಚಿಕೊಂಡಿದ್ರು. ಇಬ್ಬರೂ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದಾರೆ.