HEALTH| ವರ್ಷದ ನಂತರ ಮಕ್ಕಳಿಗೆ ಸ್ತನಪಾನ? ಇದರಿಂದ ಏನೆಲ್ಲಾ ಲಾಭ ಇದೆ ನೋಡಿ..

ಸಾಮಾನ್ಯವಾಗಿ ಒಂಬತ್ತು ತಿಂಗಳ ನಂತರ ಮಕ್ಕಳಿಗೆ ಎದೆಹಾಲು ನಿಲ್ಲಿಸುತ್ತಾರೆ. ಕೆಲವರು ಕೆಲಸಕ್ಕೆ ಹೋಗಬೇಕು ಎಂದೋ, ಒತ್ತಡದಿಂದ ಹಾಲಿನ ಉತ್ಪಾದನೆ ಕಡಿಮೆ ಆಯಿತು ಎಂದೋ ಮಕ್ಕಳಿಗೆ ಹಾಲು ಬಿಡಿಸುತ್ತಾರೆ. ವರ್ಷದ ನಂತರ ಮಕ್ಕಳಿಗೆ ಹಾಲು ಕುಡಿಸಿದರೆ ಎಲ್ಲರೆದುರು ಹಾಲು ಕುಡಿಸಲು ಕೇಳುತ್ತಾರೆ, ಇದರಿಂದ ನಾಚಿಕೆಯಾಗುತ್ತದೆ ಎಂದು ಕೆಲವರು ಹಾಲು ನಿಲ್ಲಿಸುತ್ತಾರೆ. ಇನ್ನೂ ಹಲವರು ಹೇಳುವಂತೆ ವರ್ಷದ ನಂತರ ಹಾಲಿನಲ್ಲಿ ಯಾವ ಪೋಷಕಾಂಶವೂ ಇರುವುದಿಲ್ಲ ಎನ್ನಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

  • ವರ್ಷವಾದರೂ ಹಾಲಿನಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ಪೋಷಕಾಂಶ ಇರುತ್ತದೆ. ಹಾಲು ಬರೀ ನೀರಾಗುತ್ತದೆ ಎನ್ನುವ ಮಾತು ಸುಳ್ಳು.
  • ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಲು ವರ್ಷದ ನಂತರವೂ ಹಾಲು ಕುಡಿಸಿ
  • ಹಾಲು ಕುಡಿಸುವ ತಾಯಂದಿರಿಗೂ ಇದರಿಂದ ಆರೋಗ್ಯ ಲಾಭ ಇದೆ. ಸ್ತನ ಕ್ಯಾನ್ಸರ್‌ನಂಥ ಸಮಸ್ಯೆ ನಿಮ್ಮನ್ನು ಬಾಧಿಸುವುದಿಲ್ಲ.
  • ಮಕ್ಕಳ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ.
  • ಮಕ್ಕಳಿಗೆ ತಾಯಿ ಹಾಲು ಕುಡಿಯುವ ಸಮಯ ನೆಮ್ಮದಿ ಎನಿಸುತ್ತದೆ. ಎಷ್ಟೇ ಕಿರಿಕಿರಿ ಮಾಡುತ್ತಿದ್ದರೂ ಹಾಲು ಕುಡಿಸಿದ ತಕ್ಷಣ ಅವರಿಗೆ ಸಮಾಧಾನ ಆಗುತ್ತದೆ.
  • ಹೊರಗೆ ತಿನ್ನೋದಕ್ಕೆ ಇಪ್ಪತೈದು ಡಬ್ಬಿ ಪ್ಯಾಕ್ ಮಾಡೋದಕ್ಕಿಂತ ಸೂಕ್ತ ಸ್ಥಳ ನೋಡಿ ಹಾಲು ಕುಡಿಸೋದು ಸುಲಭ ಅಲ್ವಾ?
  • ಮಕ್ಕಳು ಹಾಗೂ ತಾಯಿಗೆ ಅವರದ್ದೇ ಆದ ಸಮಯ ಸಿಗುತ್ತದೆ, ಬಾಂಧವ್ಯ ಹೆಚ್ಚುತ್ತದೆ.
  • ಬೇಧಿ, ಕಿವಿ ನೋವಿ, ಉಸಿರಾಟದ ಸಮಸ್ಯೆ ಮಕ್ಕಳ ಬಳಿ ಸುಳಿಯೋದಿಲ್ಲ.
  • ಸುಲಭವಾಗಿ ಅಲರ್ಜಿ, ಡಯಾಬಿಟಿಸ್ ಹಾಗೂ ಒಬೆಸಿಟಿ ಮಕ್ಕಳನ್ನು ಕಾಡುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!