TRENDING| ಚಂಡೆ ಬಡಿದು ವೈರಲ್ ಆದ ಮದುಮಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆ ಸರ್ವೇಸಮಾನ್ಯವಾಗಿದೆ. ಮದುಮಗಳು ಸೇರಿದಂತೆ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ನಾನಾ ಭಾಷೆಯ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಆದರೆ, ವೈರಲ್‌ ಆಗಿರುವ ವಿಡಿಯೋದಲ್ಲಿ ಫಾರ್‌ ಎ ಚೇಂಜ್‌ ಮದುಮಗಳು ತನ್ನ ತಂದೆಗೆ ಅನ್ನ ನೀಡುವ ಚೆಂಡೆ ವಾದ್ಯ ನುಡಿಸುತ್ತಾ ವೈರಲ್‌ ಆಗಿದ್ದಾಳೆ.

ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ನವವಧು ಅದ್ಭುತವಾಗಿ ಚಂಡೆ ನಡುಸುತ್ತಿರುವುದು ಎಲ್ಲರ ಮನಸೂರೆಗೊಳಿಸಿದೆ. ವಧುವಿನ ತಂದೆ ಚೆಂಡೆ ಮಾಸ್ಟರ್ ಆಗಿದ್ದು ತಂದೆ ಕಲೆಯನ್ನು ಮಗಳು ಗೌರವಿಸುತ್ತಿದ್ದಾಳೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ. ವಿಡಿಯೋದ ಕೊನೆಯಲ್ಲಿ ಮಗಳಿಗೆ ಸಾಥ್‌ ನೀಡುತ್ತಾ ತಂದೆ ಕೂಡ ಸೇರುತ್ತಾರೆ. ಇಷ್ಟಕ್ಕೇ ಸುಮ್ಮನಾಗದೆ ಚಂಡೆ ಸದ್ದಿಗೆ ಹೆಜ್ಜೆ ಹಾಕುತ್ತಾ ವರನೂ ಭಾಗವಹಿಸಿರುವ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!