ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸತ್ಯನಾರಾಯಣಪುರ ಕ್ಯಾಂಪ್ ಬಳಿ ಸೇತುವೆ ಕುಸಿದು ಟ್ರ್ಯಾಕ್ಟರ್ ಪಲ್ಟಿಯಾಗಿ 6 ಟನ್ ಅಡಿಕೆ ನೀರುಪಾಲಾದ ಘಟನೆ ನಡೆದಿದೆ.
ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದಾಗ ಸೇತುವೆ ಕುಸಿದಿದೆ. ಕೂಡಲೇ ಟ್ರ್ಯಾಕ್ಟರ್ ನಲ್ಲಿದ್ದ ಆರು ಕಾರ್ಮಿಕರು ಟ್ರ್ಯಾಕ್ಟರ್ ನಿಂದ ಹಾರಿ ಪ್ರಾಣ ಉಳಿಸಿಕೊಂಡರು.
ಆದರೆ 6 ಟನ್ ಅಡಿಕೆ ನೀರುಪಾಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.