ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ರಾಮನಗುಳಿ ಬಳಿ ಗಂಗಾವಳಿ ನದಿ ಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳೊಂದಿಗೆ ಚರ್ಚೆ ನಡೆಸಿದ ಶಾಸಕಿ ರೂಪಾಲಿ ನಾಯ್ಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು
ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ನಿರ್ಮಾಣ ಕಂಪನಿಯ ಇಂಜಿನಿಯರ್ ಶಂಭುಲಿಂಗ ಅವರು ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣು ಕೊಚ್ಚಿ ಹೋಗಿ ಕಾಮಗಾರಿಯ ಹಿನ್ನಡೆಗೆ ಕಾರಣವಾಗಿದ್ದು ಮತ್ತೆ ಮಣ್ಣು ಹಾಕುವ ಮೂಲಕ ಒಂದು ವಾರದ ಒಳಗೆ ಪೈಲಿಂಗ್ ಕಾರ್ಯ ನಡೆಸಲಾಗುವುದು ಎಂದು ಶಾಸಕರಿಗೆ ತಿಳಿಸಿದರು.
ಸ್ಥಳೀಯ ಪ್ರಮುಖರುಗಳಾದ ರಾಘವೇಂದ್ರ ಭಟ್ಟ, ರಾಘವೇಂದ್ರ ಶೆಟ್ಟಿ, ಕಾಶಿನಾಥ ನಾಯಕ ಸೇತುವೆ ಮೇಲ್ವಿಚಾರಕರುಗಳಾದ ಪ್ರಥ್ವಿ, ಪ್ರಜೀತ್ ಉಪಸ್ಥಿತರಿದ್ದರು