ಹೊಸದಿಗಂತ ವರದಿ, ಬೀದರ್:
ಬೀದರ್ ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ, ಬೀದರ್ ನಿಂದ ಬೆಂಗಳೂರಿಗೆ ಬರುವ ಜೂನ್ 15ರಿಂದ ನಾಗರಿಕ ವಿಮಾನಯಾನ ಪ್ರಾರಂಭಿಸಲಾಗುವುದು ಎಂದು 2 ದಿನಗಳ ಹಿಂದೆ ತಿಳಿಸಲಾಗಿತ್ತು, ಅದರಂತೆ ಬರುವ ಜೂನ್ 15 ರಿಂದ ವಿಮಾನಯಾನ ಪ್ರಾರಂಭಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿ, ಸ್ಟಾರ್ ಏರ್ ವಿಮಾನ ಸಂಸ್ಥೆಗೆ ಹಾರಾಟ ನಡೆಸಲು ಅನುಮತಿ ನೀಡಿದೆ ಎಂದು ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಗೊಬ್ಬರ ಹಾಗೂ ರಸಾಯನಿಕ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾರವರು ಸ್ಪಷ್ಟಪಡಿಸಿದ್ದಾರೆ.
ಈ ವಿಮಾನವು ಸದ್ಯ ಜೂನ್ 15 ರಿಂದ ವಾರದಲ್ಲಿ ನಾಲ್ಕು ದಿನ ಹಾರಾಟ ನಡೆಸಲಿದೆ, ಸೊಮುವಾರ, ಬುಧವಾರ, ಶುಕ್ರವಾರ ಹಾಗೂ ರವಿವಾರ ಬೀದರ ಜನತೆಗೆ ಸೇವೆಯನ್ನು ನೀಡಲಿದೆ, ಈ ನಾಲ್ಕು ದಿನಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ಸಾಯಂಕಾಲ 04.10ಕ್ಕೆ ಬೀದರಗೆ ತಲುಪಲಿದೆ ಮತ್ತು ಸಾ. 4.35ಕ್ಕೆ ಬೀದರನಿಂದ ಹೊರಟು 5.45ಕ್ಕೆ ಬೆಂಗಳೂರು ತಲುಪಲಿದೆ. ಈ ವಿಮಾನವು 50 ಸಿಟುಗಳನ್ನು ಹೊಂದಿರಲಿದೆ.
ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ವಿಮಾನಯಾನ ಪುನರ್ ಪ್ರಾರಂಭಗೊಳಿಸಲಾಗಿದೆ, ಈ ವಿಮಾನಯಾನ ಸೇವೆಯೂ ಮುಂದಿನ ದಿನಗಳಲ್ಲಿ ಸಮಯ ಬದಲಾವಣೆ ಜೊತೆಗೆ ಇನ್ನಷ್ಟು ಸೇವೆಯನ್ನು ಪಡೆಯಲಾಗುವುದು ಎಂದು ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಗೊಬ್ಬರ ಹಾಗೂ ರಸಾಯನಿಕ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾರವರು ತಿಳಿಸಿದ್ದಾರೆ.
ಸದ್ಯ ಪ್ರಾರಂಭಗೊಳ್ಳಲಿರುವ ವಿಮಾನಯಾನದ ಸೇವೆ ಜಿಲ್ಲೆಯ ಜನತೆ ಸದುಪಯೋಗಪಡೆದುಕೊಳ್ಳಲು ಕೇಂದ್ರ ಸಚಿವರು ಕೋರಿದ್ದಾರೆ.