Thursday, August 18, 2022

Latest Posts

ಪ್ರಧಾನಿ ಮೋದಿ ಕನಸು ಸಾಕಾರಕ್ಕೆ ಸಾಥ್ ನೀಡಿ ದಕ್ಷಿಣ ಕನ್ನಡಕ್ಕೆ ಕಾಲಿಟ್ಟರು ಬೃಜೇಶ್ ಶರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರ ಮಾಲಿನ್ಯ ಮುಕ್ತ ಭಾರತ ಕಲ್ಪನೆಯ ಜಾಗೃತಿಗಾಗಿ ಭಾರತದಾದ್ಯಂತ ಏಕಾಂಗಿಯಾಗಿ ಸೈಕಲ್ ಯಾತ್ರೆ ಕೈಗೊಂಡಿರುವ ಬೃಜೇಶ್ ಶರ್ಮಾ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಗೆ ಕಾಲಿಟ್ಟಿದ್ದಾರೆ.
ಈ ವೇಳೆ ನಾಗರಿಕರು ಅವರಿಗೆ ಆತ್ಮೀಯತೆಯ ಸ್ವಾಗತ ನೀಡಿದರು.
ಪ್ಲಾಸ್ಟಿಕ್ ದುಷ್ಪರಿಣಾಮ ಬಗ್ಗೆ ಅರಿವು ಮೂಡಿಸಬೇಕು, ಸಾವಯವ ಕೃಷಿಯ ಮಹತ್ವ ತಿಳಿಸಿಕೊಡಬೇಕು ಇವೇ ಮೊದಲಾದ ಉದ್ದೇಶದಿಂದ 2019 ರ ಸೆಪ್ಟೆಂಬರ್ ತಿಂಗಳ 17 ರಂದು ವರು ಯಾತ್ರೆ ಆರಂಭಿಸಿದ್ದರು. ಈಗಾಗಲೇ 9 ರಾಜ್ಯಗಳನ್ನು ಸಂದರ್ಶಿಸಿ ಶರ್ಮಾ ಕರ್ನಾಟಕವನ್ನು ಪ್ರವೇಶಿಸಿದ್ದಾರೆ.
ಇದುವರೆಗೆ 36,000 ಕಿ.ಮೀ. ಯಾತ್ರೆ ಪೂರೈಸಿರುವ ಅವರು, 32 ಲಕ್ಷ ವಿದ್ಯಾರ್ಥಿಗಳು, 9 ಲಕ್ಷ ರೈತರನ್ನು ಭೇಟಿಯಾಗಿ ಮಾಲಿನ್ಯ ರಹಿತ ದೇಶದ ನಿರ್ಮಾಣಕ್ಕೆ ಕೈ ಜೋಡಿಸಲು ವಿನಂತಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!