ಸುಭಾಷ್ ಚಂದ್ರ ಬೋಸ್ ರ ಅವಶೇಷಗಳನ್ನು ಭಾರತಕ್ಕೆ ವಾಪಸ್ ತನ್ನಿ: ಮಗಳ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಗಳು ತನ್ನ ತಂದೆಯ ಅವಶೇಷಗಳನ್ನ ಭಾರತಕ್ಕೆ ಮರಳಿ ತರುವಂತೆ ಮನವಿ ಮಾಡಿದ್ದಾರೆ.

ಅನಿತಾ ಬೋಸ್ ಪ್ಫಾಫ್, ಟೋಕಿಯೊದ (ಜಪಾನ್ ರಾಜಧಾನಿ) ರೆಂಕೋಜಿ ದೇವಸ್ಥಾನದಲ್ಲಿ ತನ್ನ ತಂದೆಯ ಅವಶೇಷಗಳಿವೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

ಜರ್ಮನಿಯಲ್ಲಿ ವಾಸಿಸುವ 79 ವರ್ಷದ ಫಾಫ್, ಜಪಾನಿನ ರಾಜಧಾನಿ ಟೋಕಿಯೊದಲ್ಲಿನ ದೇವಾಲಯದಿಂದ ತನ್ನ ತಂದೆಯ ಸಂರಕ್ಷಿತ ಅವಶೇಷಗಳಿಂದ ಡಿಎನ್‌ಎ ಹೊರತೆಗೆಯಲು ಅನುಮೋದನೆ ನೀಡಲು ಸಿದ್ಧ ಎಂದು ಹೇಳಿದರು.

ಆಸ್ಟ್ರಿಯನ್ ಸಂಜಾತ ಜರ್ಮನಿಯಲ್ಲಿ ನೆಲೆಸಿರುವ ಅರ್ಥಶಾಸ್ತ್ರಜ್ಞರೊಬ್ಬರ ಪ್ರಕಾರ, ನೇತಾಜಿ ಅವರು 1945ರ ಆಗಸ್ಟ್ 18ರಂದು ಮೃತಪಟ್ಟ ಬಗ್ಗೆ ಇರುವ ಸಂಶಯಗಳಿಗೆ ದೇವಾಲಯದಲ್ಲಿ ನೇತಾಜಿಯವರದ್ದು ಎನ್ನಲಾದ ಚಿತಾಭಸ್ಮ ಇರಿಸಲಾಗಿದೆ. ಇದರಿಂದ ಉತ್ತರ ಸಿಗಬಹುದು ಎಂದು ಹೇಳಿದ್ದಾರೆ.

ಎರಡನೇ ಮಹಾಯುದ್ಧದ ಕೊನೆಯ ವಾರಗಳಲ್ಲಿ ಫಾರ್ಮೋಸಾದಲ್ಲಿ ವಿಮಾನ ಅಪಘಾತದಲ್ಲಿ ನೇತಾಜಿ ಬೋಸ್ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ ಎಂದು ಅನಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಧುನಿಕ ತಂತ್ರಜ್ಞಾನದ ಮೂಲಕ ಈಗ ಡಿಎನ್‌ಎ ಪರೀಕ್ಷೆಯನ್ನಮಾಡಬಹುದು. ಉಳಿದ ಭಾಗಗಳಿಂದ DNAಗಾಗಿ ಮಾದರಿಗಳನ್ನ ಹೊರತೆಗೆಯಬಹುದು. ನೇತಾಜಿ 18 ಆಗಸ್ಟ್ 1945ರಂದು ಸಾಯಲಿಲ್ಲ ಎಂದು ಇನ್ನೂ ಅನುಮಾನಿಸುವವರು. ಟೋಕಿಯೊದ ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿರುವ ಅವ್ರ ಅವಶೇಷಗಳು ವೈಜ್ಞಾನಿಕ ಪುರಾವೆಗಳನ್ನ ಪಡೆಯಲು ಒಂದು ಅವಕಾಶವಾಗಿದೆ ಎಂದಿದ್ದಾರೆ..
ನೇತಾಜಿಯವರ ಜೀವನದಲ್ಲಿ ಭಾರತದ ಸ್ವಾತಂತ್ರ್ಯಕ್ಕಿಂತ ಮುಖ್ಯವಾದುದು ಯಾವುದೂ ಇರಲಿಲ್ಲ. ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿ ಭಾರತದಲ್ಲಿ ಬದುಕಬೇಕೆಂಬುದು ಅವರ ಆಸೆಯಾಗಿತ್ತು. ಆದಾಗ್ಯೂ, ಅವ್ರು ಸ್ವಾತಂತ್ರ್ಯದ ಸಂತೋಷವನ್ನ ಅನುಭವಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈಗ ಅವರ ಅವಶೇಷಗಳು ಭಾರತದ ಸ್ವತಂತ್ರ ನೆಲಕ್ಕೆ ಮರಳುವ ಸಮಯ ಬಂದಿದೆ ಎಂದಿದೆ.

ಬ್ರಿಟಿಷರ ಆಡಳಿತವನ್ನ ಎದುರಿಸಲು ಭಾರತೀಯ ರಾಷ್ಟ್ರೀಯ ಸೇನೆಯನ್ನು ರಚಿಸಿದ ನೇತಾಜಿ ಅವರ ಭವಿಷ್ಯವು ಭಾರತದ ಇತಿಹಾಸದಲ್ಲಿ ನಿಗೂಢವಾಗಿದ’ ಎಂದು ಅನಿತಾ ಹೇಳಿದರು.

ನೇತಾಜಿಯವರ ಏಕೈಕ ಪುತ್ರಿ ಬೋಸ್ ಫಾಫ್ ಅವ್ರು ತಮ್ಮ ತಂದೆ ಬಹಳ ಹಿಂದೆಯೇ ನಿಧನರಾದರು ಎಂದು ವಾದಿಸಿದರು. ರೆಂಕೋಜಿ ದೇವಸ್ಥಾನದಲ್ಲಿ ಅವರ ಅವಶೇಷವಿದೆ ಎಂದು ಹೇಳಿದರು. ಆದಾಗ್ಯೂ, ಭಾರತದಲ್ಲಿ ವಾಸಿಸುತ್ತಿದ್ದ ನೇತಾಜಿಯ ಅನೇಕ ಸಂಬಂಧಿಕರು 18 ಆಗಸ್ಟ್ 1945 ರಂದು ಫಾರ್ಮೋಸಾ (ತೈವಾನ್) ನಲ್ಲಿ ಸಂಭವಿಸಿದ ಜಪಾನಿನ ಮಿಲಿಟರಿ ವಿಮಾನ ಅಪಘಾತದಲ್ಲಿ ಬೋಸ್ ಬದುಕುಳಿದರು ಎಂದು ಹೇಳುತ್ತಾರೆ. ಅವ್ರು ತೈವಾನ್‌ನಿಂದ ಎಲ್ಲಿಗೆ ಹೋಗಿದ್ದಾರೆ ಎಂಬುದನ್ನ ಸರ್ಕಾರ ಕಂಡುಹಿಡಿಯಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!