Saturday, October 1, 2022

Latest Posts

ಬ್ರಿಟನ್ ರಾಣಿ ಎಲಿಜಬೆತ್-II ಅಂತ್ಯಕ್ರಿಯೆ: ಈ ರಾಷ್ಟ್ರಗಳಿಗೆ ಇಲ್ಲ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರಿಟನ್ ರಾಣಿ ಎಲಿಜಬೆತ್-II ಅಂತ್ಯಕ್ರಿಯೆ ಸೆ.19 ರಂದು ನಡೆಯಲಿದೆ. ಹಲವು ರಾಷ್ಟ್ರಗಳ ರಾಜಕೀಯ ನಾಯಕರು, ರಾಜಮನೆತನಗಳ ಸದಸ್ಯರು ಭಾಗಿಯಾಗುತ್ತಿದ್ದಾರೆ.
ಆದರೆ ಇನ್ನಷ್ಟೇ ಅತಿಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗಬೇಕಿದೆ. ಆದರೆ ಆಹ್ವಾನ ಪಡೆಯದ ಕೆಲವು ರಾಷ್ಟ್ರಗಳ ಪಟ್ಟಿಯನ್ನು ನ್ಯೂಯಾರ್ಕ್ ಪೋಸ್ಟ್ ಪ್ರಕಟಿಸಿದೆ.
ರಷ್ಯಾ, ಬೆಲಾರಸ್, ಅಫ್ಘಾನಿಸ್ತಾನ, ಮ್ಯಾನ್ಮಾರ್, ಸಿರಿಯಾ, ವೆನೆಜುವೆಲಾ ಗಳು ಆಹ್ವಾನ ಪಡೆದಿಲ.
ಆನ್ ಲೈನ್ ಪಬ್ಲಿಕೇಶನ್ ಪ್ರಕಾರ, ಚಾರ್ಲ್ಸ್-III ರಾಜನಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷರು ಶುಭಕೋರಿದ್ದರು, ಆದರೂ ರಷ್ಯಾಗೆ ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಹ್ವಾನ ಹೋಗಿಲ್ಲ.
ಉತ್ತರ ಕೊರಿಯಾ, ಇರಾನ್, ನಿಕರಾಗುವಾ ಗಳಿಗೆ ಆಹ್ವಾನ ಹೋಗಿದೆಯಾದರೂ, ದೇಶದ ಮುಖ್ಯಸ್ಥರಿಗೆ ಅಲ್ಲದೇ ರಾಯಭಾರಿ ಪ್ರತಿನಿಧಿಗಳಿಗಷ್ಟೇ ಆಹ್ವಾನವನ್ನು ಕಳಿಸಿಕೊಡಲಾಗಿದೆ.ಸೆ.09 ರಂದು ಎಲಿಜಬೆತ್-II ನಿಧನರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!