July 21, 2026
Tuesday, July 21, 2026
spot_img

ಮುರಿದುಬಿದ್ದ ಉಕ್ಕಿನ ಸೇತುವೆಯ ಸರಳು: ರಾಯಚೂರು, ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಯಚೂರು ತಾಲೂಕಿನ ಗಿಲ್ಲೆಸುಗೂರು ಬಳಿ ಆಂಧ್ರಪ್ರದೇಶ ಹಾಗೂ ಕರ್ನಾಟಕ ಮಾರ್ಗದಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿದ ಉಕ್ಕಿನ ಸೇತುವೆಯ ಸರಳುಗಳು ತುಂಡಾಗಿ ಬಿದ್ದಿದ್ದು, ರಾಯಚೂರು – ಮಂತ್ರಾಲಯ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ರಾಯಚೂರು ಹಾಗೂ ಮಂತ್ರಾಲಯಕ್ಕೆ ತೆರಳುವ ಮುಖ್ಯ ಸೇತುವೆ ಇದಾಗಿದೆ. ನಿರ್ವಹಣೆ ಕೊರತೆಯಿಂದ ತುಕ್ಕು ಹಿಡಿದು ಸರಳುಗಳು ಮುರಿದುಬಿದ್ದಿವೆ. ಅದೃಷ್ಟವಶಾತ್ ಈ ಅವಘಡದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.‌

ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಿದು ಬಿದ್ದ ಸರಳನ್ನು ಪುನಃ ಜೋಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಸೂಕ್ತ ನಿರ್ವಹಣೆಗೆ ಆಗ್ರಹಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !