ಹೊಸದಿಗಂತ ವರದಿ,ವಿಜಯನಗರ:
ಹೊಸಪೇಟೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನ ನೊಂದಣಿ, ನವೀಕರಣದ ಸ್ವೀಕೃತಿ ವಹಿಗೆ ಖಾಸಗಿ ವ್ಯಕ್ತಿ ಕಾರ್ತಿಕ್ ಎಂಬಾತ ಸಹಿ ಮಾಡಿರುವುದನ್ನು ಉಪ ಲೋಕಾಯುಕ್ತ ಬಿ.ವೀರಪ್ಪ ಪತ್ತೆ ಮಾಡಿದ್ದಾರೆ.
ತಕ್ಷಣ ಆತನನ್ನು ಬಂಧಿಸುವoತೆ ಸ್ಥಳದಲ್ಲಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಶಾ ಅವರಿಗೆ ಆದೇಶಿಸಿದರು.
ಮೂರು ದಿನಗಗಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಉಪ ಲೋಕಾಯುಕ್ತರು ಶುಕ್ರವಾರ ಸಂಜೆ ಆರ್‌ಟಿಓ ಕಚೇರಿಗೆ ಭೇಟಿ ನೀಡಿ, ವಿವಿಧ ಕಡತಗಳನ್ನು ಪರಿಶೀಲಿಸಿದರು.
೨೦೨೪ ರ ಜುಲೈನಿಂದ ೨೦೨೫ರ ಫೆಬ್ರವ ರಿ ವರೆಗೆ ವಾಹನ ನೊಂದಣಿ ನವೀಕರಣ ಸ್ವೀಕೃತಿ ವಹಿಯಲ್ಲಿ ನಿರಂತರವಾಗಿ ಸಹಿ ಮಾಡಿರುವುದು ಪತ್ತೆಯಾಗಿದೆ. ಈ ಖಾಸಗಿ ವ್ಯಕ್ತಿಯಾರೆಂಬ ಪ್ರಶ್ನೆಗೆ ಇಲಾಖೆಯ ಯಾರೊಬ್ಬರಿಂದಲೂ ಉತ್ತರ ಬರಲಿಲ್ಲ. ಇದರಿಂದ ಕೋಪಗೊಂಡ ಉಪ ಲೋಕಾಯುಕ್ತರು ನಿಮಗೆಲ್ಲಾ ನಾಚಿಕೆಯಾಗಬೇಕು. ಖಾಸಗಿ ವ್ಯಕ್ತಿ ಸರ್ಕಾರಿ ಕಚೇರಿಗೆ ಬಂದು ನಿರಂತರವಾಗಿ ಸಹಿ ಮಾಡುತ್ತಾನೆ ಎಂದರೆ ಏನು ಅರ್ಥ? ಇದರ ವಿರುದ್ಧ ಪ್ರಕರಣದ ದಾಖಲಿಸಲಾಗುತ್ತದೆ. ತನಿಖೆ ಎದುರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಕ್ರಮವಾಗಿ ಕ್ಯಾಶ್‌ಲೆಸ್ ವಹಿವಾಟು
ಸರ್ಕಾರಿ ಕಚೇರಿಗಳಲ್ಲಿ ನಿಯಮ ಬಾಹಿರವಾಗಿ ಕ್ಯಾಶ್‌ಲೆಸ್ ವಹಿವಾಟು ನಡೆಯುತ್ತಿದೆ. ಸೇವಾ ನಡತೆ ನಿಯಮಗಳನ್ವಯ ಯಾವುದೇ ಸರ್ಕಾರಿ ಅಧಿಕಾರಿ, ನೌಕರ ೫ ಸಾವಿರಕ್ಕಿಂತ ಹೆಚ್ಚು ಬೇರೊಬ್ಬರಿಗೆ ವರ್ಗಾವಣೆ ಹಾಗೂ ಪಡೆದುಕೊಳ್ಳಲು ಅನುಮತಿ ಪಡೆದಿರಬೇಕು. ಆದರೆ ಬಹುತೇಕ ಸರ್ಕಾರಿ ಸೇವಾ ಸಿಬ್ಬಂದಿಗಳು ಇದನ್ನು ಪಾಲನೆ ಮಾಡದಿರುವುದುಕಂಡು ಬಂದಿದೆ. ಗ್ರೂಪ್ ಸಿ ಮಹಿಳಾ ಸಿಬ್ಬಂದಿಯೊಬ್ಬರ ಫೋನ್ ಪೇ ವಹಿವಾಟಿನ ಬಗ್ಗೆ ಅನುಮಾನ ಕಂಡುಬoದಿದ್ದರಿoದ ಅವರ ಒಂದು ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್ ಕಳುಹಿಸಲು ಸೂಚನೆ ನೀಡಿದರು.