ASIAN GAMES 2023 | ರೇಸ್‌ವಾಕ್ ಸ್ಪರ್ಧೆಯಲ್ಲಿ ರಾಮ್-ರಾಣಿ ಜೋಡಿಗೆ ಕಂಚು, ಪದಕಗಳ ಸಂಖ್ಯೆ 70ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ 11 ನೇ ದಿನವಾದ ಇಂದು ಬೆಳ್ಳಂಬೆಳಗ್ಗೆ ಭಾರತ ಕಂಚಿನ ಪದಕವನ್ನು ಗೆದ್ದಿದೆ.

ರಾಮ್ ಬಾಬು ಹಾಗೂ ಮಂಜು ರಾಣಿ 35 ಕಿಮೀ ರೇಸ್‌ವಾಕ್ ಮಿಶ್ರಿತ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ.

ಒಟ್ಟಾರೆ 5 ಗಂಟೆ ಹಾಗೂ 51 ನಿಮಿಷಗಳು ನಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಪದಕದಿಂದಾಗಿ ಭಾರತದ ಪದಕ ಬೇಟೆ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!