Friday, March 24, 2023

Latest Posts

 ಸತತ 9 ಗಂಟೆಗಳ ಕಾಲ ಕವಿತಾ ವಿಚಾರಣೆ: ಮಾರ್ಚ್ 16ರಂದು ಮತ್ತೆ ಬರುವಂತೆ ಇಡಿ ಬುಲಾವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಎಂಎಲ್‌ಸಿ ಕವಿತಾ ಅವರನ್ನು ಸತತ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಬಿಆರ್‌ಎಸ್ ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಪುತ್ರಿ ಕೆ ಕವಿತಾ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ.

ಮಾರ್ಚ್ 16 ರಂದು ಮತ್ತೆ ಕೇಂದ್ರೀಯ ಸಂಸ್ಥೆ ಆಕೆಗೆ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಅಬಕಾರಿ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.

ಇನ್ನೂ ಈ ವಿಚಾರ ಕುರಿತಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಬಿಆರ್‌ಎಸ್ ವಿರುದ್ಧ ಕೇಂದ್ರದ “ಬೆದರಿಕೆಯ ತಂತ್ರ” ಎಂದು ಕರೆದಿದ್ದಾರೆ. ಪಕ್ಷವು ಹೋರಾಟವನ್ನು ಮುಂದುವರಿಸಿ, ಕೇಂದ್ರದ ವೈಫಲ್ಯಗಳನ್ನು ಬಹಿರಂಗಪಡಿಸುತ್ತದೆ. ಭಾರತದ ಉಜ್ವಲ ಮತ್ತು ಉತ್ತಮ ಭವಿಷ್ಯಕ್ಕಾಗಿ ಧ್ವನಿ ಎತ್ತುತ್ತದೆ ಎಂದು ಹೇಳಿದರು.

ದೆಹಲಿ ಮದ್ಯ ಹಗರಣದ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇಡಿ)ಕವಿತಾ ಸ್ಪಷ್ಟನೆ ನೀಡಿದ್ದಾರೆ. ಮದ್ಯದ ಹಗರಣದ ಬಗ್ಗೆ ತಮಗೇನೂ ಗೊತ್ತಿಲ್ಲ. ಮದ್ಯ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಮೇಲಾಗಿ ನಾನು ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ ಎಂದು ಇಡಿಗೆ ಸ್ಪಷ್ಟಪಡಿಸಿದ್ದಾರೆ. ಆಗ ಈಡಿಕ ಕವಿತಾ ಅವರ ಹೇಳಿಕೆಯನ್ನು ಮೌಖಿಕ ಮತ್ತು ಲಿಖಿತವಾಗಿ ದಾಖಲಿಸಿದೆ.

ವಿಚಾರಣೆ ಬಳಿಕ ಹೈದರಾಬಾದ್‌ಗೆ ಆಗಮಿಸಿರುವ ಕವಿತಾ ಮಾರ್ಚ್‌ 16ರಂದು ಮರುವಿಚಾರಣೆಗೆ ಹಾಜರಾಗಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!