ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭಾ ಚುನಾವಣಾ ಕಾವು ಜೋರಾಗಿದ್ದು, ಕಾಂಗ್ರೆಸ್ ಪಕ್ಷದ ಮೇಲೆ ಆಡಳಿತಾರೂಢ ಬಿಆರ್ಎಸ್ ನಾಯಕರು ಟೀಕೆಗಳು ಸುರಿಮಳೆ ಹರಿಸುತ್ತಿದ್ದಾರೆ. ಇದರ ಭಾಗವಾಗಿ ‘ರಾಹುಲ್ ಗಾಂಧಿ, ನಿಮ್ಮ ಸ್ಕ್ರಿಪ್ಟ್ ರೈಟರ್ ಅನ್ನು ಮೊದಲು ಬದಲಿಸಿ ಎಂದು ಕುಟುಕಿದರು. ತೆಲಂಗಾಣದೊಂದಿಗೆ ನೆಹರೂ, ಇಂದಿರಾಗಾಂಧಿ ಅವರ ಒಡನಾಟವಿದೆ ಎಂಬ ರಾಹುಲ್ ಮಾತಿಗೆ ಕವಿತಾ ತಿರುಗೇಟು ನೀಡಿದರು.
ಮೆಟ್ಹಳ್ಳಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕವಿತಾ..ʻತೆಲಂಗಾಣಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ..ಆಗ ಇಂದಿರಾ ಗಾಂಧಿಯಿಂದ ಹಿಡಿದು ರಾಜೀವ್ ಗಾಂಧಿ, ಸೋನಿಯಾ ಗಾಂಧಿ ತನಕ ತೆಲಂಗಾಣಕ್ಕೆ ಯಾರು ಏನೂ ಮಾಡಿಲ್ಲ. ತೆಲಂಗಾಣಕ್ಕೆ ಗಾಂಧಿ ಕುಟುಂಬ ಅನ್ಯಾಯ ಮಾಡಿದೆ. ತೆಲಂಗಾಣ ವಿದ್ಯಾರ್ಥಿಗಳ ಸಾವಿಗೆ ಸೋನಿಯಾ ಗಾಂಧಿ ಕಾರಣʼ ಎಂದು ಆರೋಪಿಸಿದರು.
ತೆಲಂಗಾಣದಲ್ಲಿ ಚುನಾವಣೆ ಬಂದಾಗ ಮಾತ್ರ ರಾಹುಲ್ ಗಾಂಧಿ ಬರುತ್ತಾರೆ, ಅದಕ್ಕಾಗಿಯೇ ಅವರು ರಾಹುಲ್ ಗಾಂಧಿ ಅಲ್ಲ ಚುನಾವಣಾ ಗಾಂಧಿ ಎಂದು ಕರೆಯುತ್ತಾರೆ. ಆಂಧ್ರಪ್ರದೇಶದ ಹಕ್ಕುಗಳಿಗಾಗಿ ಸೋನಿಯಾ ಮಾತನಾಡುತ್ತಾರೆ..ಆದರೆ ತೆಲಂಗಾಣದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಇವರ ಮಾತನ್ನು ನಂಬಲು ಯಾರೂ ಸಿದ್ಧರಿಲ್ಲ ಎಂದರು.