ಹೊಸದಿಗಂತ ಕಲಬುರಗಿ:
ಮಹಿಳೆಯೋರ್ವರನ್ನು ಕೊಲೆ ಮಾಡಿ, ಮೈಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ಕಲಬುರಗಿ ತಾಲೂಕಿನ ಇಟಗಾ ಗ್ರಾಮದ ಬಳಿ ನಡೆದಿದೆ.
ಕಲಬುರಗಿ ನಗರದ ಸಂಗಮೇಶ್ವರ ಬಡಾವಣೆಯ ನಿವಾಸಿಯಾದ ಜ್ಯೋತಿ (29) ಬರ್ಬರವಾಗಿ ಹತ್ಯೆಯಾಗಿರುವ ಮಹಿಳೆಯಾಗಿದ್ದು,ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿತ್ತು. ಕೌಟುಂಬಿಕ ಕಲಹಗಳಿಂದ ಕೊಲೆಗೈಯ್ಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನೂ ಬರ್ಬರವಾಗಿ ಹತ್ಯೆಗೊಳಗಾದ ಜ್ಯೋತಿ ಕಳೆದ ಐದು ವರ್ಷಗಳಿಂದ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ನೆಲೆಸಿದ್ದು, ನಿನ್ನೆ ಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ ಜ್ಯೋತಿ, ಮಧ್ಯಾಹ್ನದ ಹೊತ್ತಿಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಈ ಕುರಿತು ಪರಹತಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.