ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದ ದಕ್ಷಿಣ ವ್ಯಾಂಕೋವರ್‌ನಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಕೆನಡಾದ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮೃತ ವಿದ್ಯಾರ್ಥಿಯನ್ನು ಚಿರಾಗ್ ಅಂತಿಲ್ (24) ಎಂದು ಗುರುತಿಸಲಾಗಿದೆ. ಶುಕ್ರವಾರ, ಏಪ್ರಿಲ್ 12 ರಂದು ರಾತ್ರಿ 11:00 ಗಂಟೆಗೆ, ಗುಂಡಿನ ಸದ್ದು ಕೇಳಿಬಂದ ಬಗ್ಗೆ ಸ್ಥಳೀಯರು ನೆರೆಹೊರೆಯವರು ವರದಿ ಮಾಡಿದ ನಂತರ ಪರಿಶೀಲನೆ ನಡೆಸಲಾಗಿದೆ.
ಈ ಪ್ರದೇಶದಲ್ಲಿ ವಾಹನವೊಂದರಲ್ಲಿ ಚಿರಾಗ್ ಅವರ ಶವ ಪತ್ತೆಯಾಗಿದೆ. ಇದುವರೆಗೆ ಯಾವುದೇ ಆರೋಪಿಗಳ ಬಂಧನವಾಗಿಲ್ಲ. ತನಿಖೆ ಇನ್ನೂ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.