ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುರ್ಷಿದಾಬಾದ್ ಹಿಂಸಾಚಾರ ಹಿಂದೆ ಬಿಜೆಪಿ ಹಾಗೂ ಬಿಎಸ್‌ಎಫ್‌ನ ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪಿಸಿದ್ದಾರೆ.
ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂಸಾಚಾರದಲ್ಲಿ ಬಾಂಗ್ಲಾದೇಶ ಭಾಗಿಯಾಗಿದೆ ಎಂಬ ಗೃಹ ಸಚಿವಾಲಯದ ಟ್ವೀಟ್ ಅನ್ನು ಗಮನಿಸಿದೆ. ಗಡಿಯನ್ನು ಕಾಪಾಡುವ ಜವಾಬ್ದಾರಿಯು ಬಿಎಸ್‌ಎಫ್ (BSF) ಮತ್ತು ಕೇಂದ್ರ ಸರ್ಕಾರದ್ದಾಗಿದೆ. ಇದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ ಎಂದು ದೂರಿದರು.
ಬಾಂಗ್ಲಾದೇಶದಿಂದ ಗಡಿ ನುಸುಳುವಿಕೆಗೆ ಅವಕಾಶ ನೀಡುವ ಮೂಲಕ ಬಿಎಸ್‌ಎಫ್, ಕೇಂದ್ರ ಸಂಸ್ಥೆಗಳು ಹಾಗೂ ಬಿಜೆಪಿಯ ಕೆಲವರು ಶಾಂತಿಯನ್ನು ಕದಡಲು ನೆರವು ನೀಡುತ್ತಿದ್ದಾರೆ. ಬಿಎಸ್‌ಎಫ್‌ನ ಕೆಲವರು ಈ ಘಟನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಕೆಲವು ಮೂಲಗಳು ನನಗೆ ಮಾಹಿತಿ ನೀಡಿದೆ ಎಂದು ಆರೋಪಿಸಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ವಕ್ಫ್ ತಿದ್ದುಪಡಿ ಕಾಯ್ದೆಯು ದೇಶವನ್ನು ವಿಭಜಿಸುತ್ತದೆ. ಹೀಗಾಗಿ ಇದನ್ನು ಜಾರಿಗೊಳಿಸದಿರಿ ಎಂದು ಹೇಳಿದರು.