ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಗುರುದಾಸ್ಪುರ ಜಿಲ್ಲೆಯ ಗಡಿ ಬಳಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ರೈತರನ್ನು ಗುರಿಯಾಗಿಸಿಕೊಂಡು ಸುಧಾರಿತ ಸ್ಫೋಟಕ ಸಾಧನ(IED) ದಾಳಿಯನ್ನು ಗಡಿ ಭದ್ರತಾ ಪಡೆ(BSF)ಯ ಯೋಧರು ವಿಫಲಗೊಳಿಸಿದ್ದಾರೆ. ಈ ವೇಳೆ ಯೋಧರ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ಬಿಎಸ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
BSF ಪ್ರಕಾರ, ಹಗಲಿನಲ್ಲಿ BSF ಸಿಬ್ಬಂದಿ ಮತ್ತು ಸ್ಥಳೀಯ ರೈತರು ಬಳಸುವ ಮಾರ್ಗಗಳನ್ನು ಸುರಕ್ಷಿತಗೊಳಿಸುವ ನಿಯಮಿತ ಪ್ರಯತ್ನಗಳ ಭಾಗವಾಗಿ ಗಸ್ತು ತಿರುಗುತ್ತಿತ್ತು. ಈ ವೇಳೆ ತಂಡವು ಶಂಕಿತ IED ಮತ್ತು ಹೊಲಗಳಲ್ಲಿ ಅಡಗಿರುವ ಗುಪ್ತ ತಂತಿಗಳ ಜಾಲವನ್ನು ಪತ್ತೆ ಮಾಡಿದೆ.
ತಕ್ಷಣ ಪ್ರದೇಶವನ್ನು ಸುತ್ತುವರೆದು ಸ್ವಚ್ಛಗೊಳಿಸಲು ಯತ್ನಿಸುತ್ತಿರುವಾಗ, ಮರೆಮಾಚಿದ ಸ್ಫೋಟಕ ಸಾಧನ ಆಕಸ್ಮಿಕವಾಗಿ ಸ್ಫೋಟಗೊಂಡಿತು. ಇದು ಒಬ್ಬ ಜವಾನನಿಗೆ ಗಂಭೀರ ಗಾಯವಾಗಿದೆ ಎಂದು BSF ತಿಳಿಸಿದೆ.
ಸ್ಫೋಟದ ಹೊರತಾಗಿಯೂ, BSF ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿ ದೊಡ್ಡ ದುರಂತವನ್ನು ತಪ್ಪಿಸಿದೆ ಎಂದು ಬಿಎಸ್ಎಫ್ ತಿಳಿಸಿದೆ.