ಎರಡು ಬೈಕ್‌ಗಳ​ ನಡುವೆ ಡಿಕ್ಕಿ: ಬಿಎಸ್‌ಎಫ್‌ ಸಿಬ್ಬಂದಿ, ಯುಟ್ಯೂಬರ್ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡು ಬೈಕ್‌ಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಬಿಎಸ್‌ಎಫ್‌ ಸಿಬ್ಬಂದಿ ಸುಧಾಕರ್ ಹಾಗೂ ಯುಟ್ಯೂಬರ್‌ ಗಣಿ ದಾರುಣವಾಗಿ ‌ಸಾವನ್ನಪ್ಪಿದವರು.

ಕೆಲಸ ಮುಗಿಸಿ ಬಿಎಸ್‌ಎಫ್ ಕಾಂಪೌಂಡ್​ನಿಂದ ಸುಧಾಕರ್​ ಅವರು ಹೊರ ನಡೆಯುತ್ತಿದ್ದರು. ಈ ವೇಳೆ ಸುಧಾಕರ್​ ಬೈಕ್​ಗೆ ಮತ್ತೊಬ್ಬ ಬುಲೆಟ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಬುಲೆಟ್​​​​​​​​​ ಸವಾರನ ಡಿಕ್ಕಿಯಿಂದಾಗಿ ಸವಾರ ಸುಧಾಕರ್​​​​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ಸವಾರ ಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!