ಗುಜರಾತ್ ಭುಜ್ʼನ ಕ್ರೀಕ್ ಪ್ರದೇಶದಲ್ಲಿ ಏಳು ಪಾಕ್ ಮೀನುಗಾರಿಕಾ ದೋಣಿ ವಶಕ್ಕೆ ಪಡೆದ BSF

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಭುಜ್ʼನ ಕ್ರೀಕ್ ಪ್ರದೇಶದ ಹರಾಮಿ ನಲ್ಲಾದಲ್ಲಿ ಗಡಿ ಭದ್ರತಾ ಪಡೆ ಗುರುವಾರ ಏಳು ಪಾಕಿಸ್ತಾನಿ ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಂಡಿದೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಾಕಿಸ್ತಾನಿ ಮೀನುಗಾರರ ಬೋಟ್​ಗಳನ್ನು ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್ ಎಫ್ʼನ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಗುಜರಾತ್ ಫ್ರಾಂಟಿಯರ್ ಮಾಹಿತಿ ನೀಡಿದ್ದಾರೆ.
ಒಂದು ವಾರದ ಹಿಂದೆ ಫೆಬ್ರವರಿ 10ರಂದು BSF ಇದೇ ಸ್ಥಳದಿಂದ 6 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿತ್ತು. ಹಾಗೇ ಆ ಮೀನುಗಾರರಿಗೆ ಸಂಬಂಧಿಸಿದ 11 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದೀಗ ಇಂದು ಕೊಳೆತ ಮೀನುಗಳೊಂದಿಗೆ 7 ಪಾಕಿಸ್ತಾನಿ ಮೀನುಗಾರಿಕಾ ಬೋಟ್​ಗಳನ್ನುವಶಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!