ದಿನಭವಿಷ್ಯ: ಇತರರ ವಿಷಯದಲ್ಲಿ ಮೂಗು ತೂರಿಸಬೇಡಿ, ಇದರಿಂದ ತೊಂದರೆಯಾದೀತು!

ಶುಕ್ರವಾರ, 18

ಮೇಷ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಖಾಸಗಿ ಬದುಕಲ್ಲಿ ನಿಮಗೆ ಪೂರಕ ಆಗದಿರಲೂಬಹುದು.

ವೃಷಭ
ನಿಮ್ಮ ವೃತ್ತಿಯಲ್ಲಿ ನೀವು ತೋರುವ ಕಠಿಣ ಧೋರಣೆಯು ಸಮಸ್ಯೆ ಹುಟ್ಟಲು ಕಾರಣವಾಗುವುದು. ಕೆಲವರ ಬಗ್ಗೆ ಮೃದು ಧೋರಣೆ ತೋರಿ.

ಮಿಥುನ
ದಿನವಹಿ ಕಾರ್ಯದಲ್ಲಿ ಬದಲಾವಣೆ ಬಯಸುವಿರಿ. ವೃತ್ತಿಯ ಒತ್ತಡ ಮರೆತು ಕೌಟುಂಬಿಕ ಕಾರ್ಯದಲ್ಲಿ ತೊಡಗಿ. ಆಪ್ತರ ಜತೆ ಸಂವಾದ.

ಕಟಕ
ಇತರರ ವಿಷಯದಲ್ಲಿ ಮೂಗು ತೂರಿಸದಿರಿ. ಅವರು ಅದನ್ನು ಇಷ್ಟಪಡಲಾರರು. ಇದು ನಿಮ್ಮೊಳಗಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸಿಂಹ
ನಿಮ್ಮ ಸಾಮರ್ಥ್ಯಕ್ಕೆ ಆಗುವಂತಹ ಕಾರ್ಯ ಮಾತ್ರ ಮಾಡಿರಿ. ಇಲ್ಲವಾದರೆ ಸೋಲು ಕಾಣುವಿರಿ. ಖಾಸಗಿ ಸಂಬಂಧದಲ್ಲಿ ಏರುಪೇರು ಸಂಭವ.

ಕನ್ಯಾ
ಹಣದ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಆರ್ಥಿಕವಾಗಿ ಸದೃಢ ಪರಿಸ್ಥಿತಿ. ನೆರವು ಕೇಳಿ ಬಂದವರಿಗೆ ನಿರಾಶೆ ಮಾಡಬೇಡಿ.

ತುಲಾ
ಕೌಟುಂಬಿಕ ವಿಷಯವೊಂದು ನಿಮ್ಮ ಮನಶ್ಯಾಂತಿ ಕಲಕಬಹುದು. ಅದರ ಪರಿಹಾರಕ್ಕೆ ಆದ್ಯತೆ ಕೊಡಿ. ಅದನ್ನು ಹಾಗೇ ಕಡೆಗಣಿಸಬೇಡಿ.

ವೃಶ್ಚಿಕ
ಸಂಕೀರ್ಣ ವಿಷಯಗಳಲ್ಲಿ ನಿಮ್ಮ ಆತ್ಮಪ್ರಜ್ಞೆಯಂತೆ ನಡಕೊಳ್ಳಿ. ಅದು ಒಳಿತನ್ನೇ ತರಲಿದೆ. ಇತರರ ಸಲಹೆ ಕೇಳಿ ತಪ್ಪು ದಾರಿ ತುಳಿಯದಿರಿ. ವದಂತಿ ನಂಬದಿರಿ.

ಧನು
ಅಕ ಕೆಲಸ. ಅದರ ಒತ್ತಡದಲ್ಲೆ ದಿನ ಕಳೆಯುವಿರಿ. ಹಾಗಾಗಿ ಇನ್ನಿತರ ಕೌಟುಂಬಿಕ ವಿಷಯಗಳಿಗೆ ಸಮಯ ಸಾಲದು. ಶೇರು ಹೂಡಿಕೆಯಲ್ಲಿ ಲಾಭ.

ಮಕರ
ನಿಮಗೆ ಸಿಕ್ಕುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಪ್ರೀತಿಪಾತ್ರರಿಂದ ಭಾವನಾತ್ಮಕ ಪ್ರತಿಸ್ಪಂದನೆ.

ಕುಂಭ
ಕೌಟುಂಬಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಿ. ನಿಮ್ಮ ಆಪ್ತರೂ ಇದರಿಂದ ಸಂತೋಷಗೊಳ್ಳುವರು. ಆರ್ಥಿಕವಾಗಿ ಶುಭ ಬೆಳವಣಿಗೆ.

ಮೀನ
ಇತ್ತೀಚೆಗೆ ನಿಮ್ಮ ಆರೋಗ್ಯವನ್ನು ಕಡೆಗಣಿಸುತ್ತಿದ್ದೀರಿ. ತಿನ್ನುವ ವಿಷಯದಲ್ಲಿ ಹೆಚ್ಚು ನಿಯಂತ್ರಣ ಸಾಸಿ. ಬಾಯಿ ಚಪಲ ಒಳ್ಳೆಯದಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!