ಪಂಜಾಬ್ ನ ಗಡಿಯಲ್ಲಿ ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಂಜಾಬ್ ನ ಗಡಿಯಲ್ಲಿ ಡ್ರಗ್ಸ್ ಎಸೆದು ವಾಪಸ್ ಹೋಗುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್ಎಫ್ ಪಡೆಗಳು ಹೊಡೆದುರುಳಿಸಿವೆ.
ಮಂಗಳವಾರ ಸಂಜೆ 7:20 ರ ಸುಮಾರಿಗೆ ಗಡಿ ಭದ್ರತಾ ಪಡೆಗಳು ಡ್ರೋನ್ ಅನ್ನು ಹೊಡೆದುರುಳಿಸಿವೆ. ಅದನ್ನು ಪಾಕಿಸ್ತಾನ ರೇಂಜರ್ಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಇಂದು ಬೆಳಗ್ಗೆ ಆ ಪ್ರದೇಶದಲ್ಲಿ ಶೋಧ ನಡೆಸಿದಾಗ ಭಾರತದ ಗಡಿ ಪೋಸ್ಟ್ ಭರೋಪಾಲ್ ಎದುರು ಪಾಕಿಸ್ತಾನ ಭೂಪ್ರದೇಶದಲ್ಲಿ 20 ಮೀಟರ್ ಒಳಗೆ ಡ್ರೋನ್ ಬಿದ್ದಿರುವುದು ಕಂಡುಬಂದಿದೆ. ನಂತರ ಸೈನಿಕರು, ಭರೋಪಾಲ್ ಗ್ರಾಮದ ಗಡಿ ಬೇಲಿಯ ಹಿಂದೆ 4.3 ಕೆಜಿ ಶಂಕಿತ ಹೆರಾಯಿನ್ ಹೊಂದಿದ್ದ ಪ್ಯಾಕೆಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!