ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಭಾರತದೊಳಗೆ ನುಸುಳಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‌ಸೋಮವಾರ ರಾತ್ರಿ ಅಮೃತಸರ ನಗರದ ಉತ್ತರಕ್ಕೆ ಸುಮಾರು 40 ಕಿಮೀ ದೂರದಲ್ಲಿರುವ ಚಹರ್‌ಪುರ ಗ್ರಾಮದ ಬಳಿ ಡ್ರೋನ್ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸುವುದನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ  ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದರು.
ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಬಿಎಸ್‌ಎಫ್ ಭಾಗಶಃ ಹಾನಿಗೊಳಗಾದ ಹೆಕ್ಸಾ ಕಾಪ್ಟರ್ ಅನ್ನು ವಶಪಡಿಸಿಕೊಂಡಿದೆ. ಆರು ರೋಟರ್‌ಗಳನ್ನು ಹೊಂದಿರುವ ಮಾನವರಹಿತ ವೈಮಾನಿಕ ವಾಹನದ ಕೆಳಗೆ ಬಿಳಿ ಬಣ್ಣದ ಪಾಲಿಥಿನ್‌ನಲ್ಲಿ ಶಂಕಿತ ವಸ್ತುವನ್ನು ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್ ಡ್ರಗ್ಸ್ ಹೊತ್ತೊಯ್ಯುತ್ತಿತ್ತು ಎಂದು ಶಂಕಿಸಲಾಗಿದ್ದು, ಈ ಸಂಬಂಧ ಪರಿಶೀಲನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!