Wednesday, November 29, 2023

Latest Posts

ಭಾರತ-ಬಾಂಗ್ಲಾ ಗಡಿಯಲ್ಲಿ ‘ಜೇನುಗೂಡುಗಳನ್ನು ಸ್ಥಾಪಿಸುವ ಮುಂದಾದ BSF!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜೇನುಗೂಡುಗಳನ್ನು ಸ್ಥಾಪಿಸುವ ವಿಶಿಷ್ಟ ಪ್ರಯೋಗವನ್ನು ಗಡಿ ಭದ್ರತಾ ಪಡೆ (BSF) ಕೈಗೊಂಡಿದೆ .
ಗಡಿ ಭದ್ರತೆಯನ್ನು ಖಾತ್ರಿಪಡಿಸುವ ಮತ್ತು ಜೇನುಸಾಕಣೆಯ ಮೂಲಕ ಸ್ಥಳೀಯ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ನಾಡಿಯಾ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಬಿಎಸ್ಎಫ್ನ 32ನೇ ಬೆಟಾಲಿಯನ್ ಇತ್ತೀಚೆಗೆ ಮೊದಲ ಬಾರಿಗೆ ಈ ರೀತಿಯ ಉಪಕ್ರಮವನ್ನು ಪ್ರಾರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶವು ಸರಿಸುಮಾರು 4,096-ಕಿಮೀ ಗಡಿಯನ್ನು ಹಂಚಿಕೊಂಡಿದ್ದರೆ ಅದರಲ್ಲಿ ಪಶ್ಚಿಮ ಬಂಗಾಳವು ಸುಮಾರು 2,217 ಕಿ.ಮೀ. ಗಡಿ ಹೊಂದಿದೆ. ಈ ಯೋಜನೆಗಾಗಿ ಬಿಎಸ್ಎಫ್ ಅನ್ನು ಆಯುಷ್ ಸಚಿವಾಲಯ ನಿಯೋಜಿಸಿದೆ.

ಸಚಿವಾಲಯವು ಜೇನುಗೂಡುಗಳನ್ನು ಗಡಿ-ಕಾವಲು ಪಡೆಗೆ ಒದಗಿಸಿದೆ. ಮಿಶ್ರಲೋಹದಿಂದ ತಯಾರಿಸಿದ ‘ಸ್ಮಾರ್ಟ್ ಬೇಲಿ’ಯಲ್ಲಿ ಅವುಗಳನ್ನು ಅಳವಡಿಸುವ ಪರಿಣತಿಯನ್ನು ನೀಡಿದೆ. ಈ ಕಲ್ಪನೆಯನ್ನು ರೂಪಿಸಿದ 32ನೇ ಬಿಎಸ್ಎಫ್ ಬೆಟಾಲಿಯನ್ ಕಮಾಂಡೆಂಟ್ ಸುಜೀತ್ ಕುಮಾರ್, ಕೇಂದ್ರದ ‘ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ’ (ವಿವಿಪಿ) ಅಡಿಯಲ್ಲಿ ಉಪಕ್ರಮವನ್ನು ಕೈಗೊಂಡಿದೆ. ಆಯುಷ್ ಸಚಿವಾಲಯಕ್ಕೆ ಔಷಧೀಯ ಸಸ್ಯಗಳನ್ನು ಒದಗಿಸುವಂತೆ ವಿನಂತಿಸುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಹೇಳಿದರು.

ಭಾರತ-ಬಾಂಗ್ಲಾದೇಶ ಗಡಿ ಬೇಲಿಗೆ ಜೇನುಗೂಡುಗಳನ್ನು ಕಟ್ಟುವ ಕಲ್ಪನೆಯನ್ನು ನವೆಂಬರ್ 2ರಂದು ಪ್ರಾರಂಭಿಸಲಾಯಿತು. ಜೇನುನೊಣಗಳ ಪೆಟ್ಟಿಗೆಗಳು ಜೇನುನೊಣ ಕೃಷಿಯಲ್ಲಿ ತೊಡಗಿರುವ ಸ್ಥಳೀಯರಿಗೆ ಲಭ್ಯವಾಗುವಂತೆ ಬಿಎಸ್‌ಎಫ್ ಮಾಡಿದೆ. ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ಬಂಗಾಳದ ಗಡಿಭಾಗದ ಗಡಿ ಪ್ರದೇಶಗಳು ದನ, ಚಿನ್ನ, ಬೆಳ್ಳಿ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯಂತಹ ಗಡಿಯಾಚೆಗಿನ ಅಪರಾಧಗಳಿಗೆ ಗುರಿಯಾಗುತ್ತವೆ. ಈ ಹಿಂದೆ ದುಷ್ಕರ್ಮಿಗಳು ಮತ್ತು ಕಳ್ಳಸಾಗಾಣಿಕೆಗೆ ಗಡಿ ಬೇಲಿಗಳನ್ನು ಕತ್ತರಿಸಿದ ನಿದರ್ಶನಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇದನ್ನು ತಡೆಯಲು ಕೂಡ ಸಹಕಾರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!