ಹೆರಾಯಿನ್‌ ಕಳ್ಳಸಾಗಣೆಯನ್ನು ವಿಫಲಗೊಳಿಸಿದ ಗಡಿ ಭದ್ರತಾ ಪಡೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್) ಗುರುವಾರ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಪ್ರದೇಶದ ಗಡಿಯಲ್ಲಿ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿವೆ. ಮಾದಕ ದ್ರವ್ಯವನ್ನು ಹೊತ್ತು ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿಯೊಬ್ಬನ ಮೇಲೆ ಗುಂಡಯ ಹಾರಿಸಿ ಗಾಯಗೊಳಿಸಿದ್ದು ಆತನಿಂದ 8 ಕೆಜಿ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ.

ಅನುಮಾನಾಸ್ಪದ ವ್ಯಕ್ತಿಯೊಬ್ಬ ಒಂದು ಚೀಲವನ್ನು ಹೊತ್ತು ಗಡಿ ದಾಟುತ್ತಿರುವುದನ್ನು ಬಿಎಸ್ಎಫ್ ಪಡೆಗಳು ಗಮನಿಸಿದವು. ಕೂಡಲೇ ಎಚ್ಚೆತ್ತ ಬಿಎಸ್ ಎಫ್ ಪಡೆಗಳು ಒಳನುಗ್ಗಿದವರ ಮೇಲೆ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದವು. ತಪಾಸಣೆ ನಡೆಸಿದಾಗ ಆತನ ಮೇಲೆ ಎಂಟು ಪ್ಯಾಕೆಟ್‌ಗಳು (ತೂಕ ಸುಮಾರು 1 ಕೆಜಿ ತೂಕದ) ಮಾದಕ ವಸ್ತುಗಳು ಪತ್ತೆಯಾಗಿವೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!