ಹೊಸದಿಗಂತ ವರದಿ,ವಿಜಯಪುರ:
ಭಾರತ ಸಂಚಾರ ನಿಗಮ ಲಿಮಿಟೆಡ್ ಜನರಲ್ ಮ್ಯಾನೇಜರ್ ಬಳಕೆ ಮಾಡುತ್ತಿದ್ದ ಕಾರನ್ನು ನಗರದ ಬಿಎಸ್ಎನ್ಎಲ್ ಕಚೇರಿಯ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಪೊಲೀಸರು ಜಪ್ತಿ ಮಾಡಿದ್ದಾರೆ.
ಇಲ್ಲಿನ ಬಿಎಸ್ಎನ್ಎಲ್ ನಿಂದ ನೀಡಿದ್ದ ಕಾರಿನ ಬದಲಾಗಿ ಬೇರೆ ಕಾರು ಬಳಕೆ ಮಾಡುತ್ತಿದ್ದ ವಿಕಾಸ್ ಜೈಕರ್ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ವಿಕಾಸ್ ಜೈಕರ್ ಗೆ ಕೆಎ 22 ಸಿ 8059 ನಂಬರಿನ ಎಲೋ ಬೋರ್ಡ್ ಕಾರ್ ನೀಡಲಾಗಿತ್ತು. ಆದರೆ ಈ ನಂಬರಿನ ಕಾರಿನ ಬದಲಾಗಿ ಕೆಎ 22 ಎಂಬಿ 0494 ನಂಬರಿನ ಕಾರ್ ಬಳಕೆ ಮಾಡುತ್ತಿದ್ದರು. ಈ ಕುರಿತು ಜನರಲ್ ಮ್ಯಾನೇಜರ್ ವಿಕಾಸ್ ಜೈಕರ್ ಗೆ ಬಿಎಸ್ಎನ್ಎಲ್ ಸಿನೀಯರ್ ಆಫೀಸ್ ಸುರೇಶ ಬಿರಾದಾರ ಈ ಬಗ್ಗೆ ಪ್ರಶ್ನೆ ಮಾಡಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.