ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಸಂಸ್ಥೆಗಳಿಗೆ ಟಕ್ಕರ್ ಕೊಡುತ್ತಿರುವ ‘ಭಾರತ್ ಸಂಚಾರ್ ನಿಗಮ್ ಲಿಮಿಟೆಡ್’ ಹೊಸ ಲೋಗೋ ಬಿಡುಗಡೆ ಮಾಡಿದೆ.
ಹೊಸ ಲುಕ್‌ನಲ್ಲಿ ಕಂಗೊಳ್ಳಿಸುತ್ತಿರುವ ಬಿಎಸ್‌ಎನ್‌ಎಲ್ ಜಿಯೋ, ಏರ್‌ಟೆಲ್, ವೋಡಾಫೋನ್‌ಗಿಂತಲೂ ಅತ್ಯುತ್ತಮ ಯೋಜನೆಗಳನ್ನು ಜನರಿಗೆ ಕೊಡುತ್ತಿದೆ. ಇದೀಗ ‘ಹೊಸ ಲೋಗೊ’ ಸಮೇತವಾಗಿ ಅಖಾಡಕ್ಕೆ ಇಳಿದಿದೆ.
ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ತನ್ನ ಲೋಗೋ ಅನ್ನು ಬದಲಾಯಿಸಿಕೊಂಡು, ಹೊಸ ಚೈತನ್ಯದೊಂದಿಗೆ ಗ್ರಾಹಕರ ಮುಂದೆ ಬಂದಿದೆ. ಬಳಕೆದಾರ ಸ್ನೇಹಿ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳನ್ನು ಒಂದರ ಮೇಲೊಂದರಲ್ಲಿ ಘೋಷಿಸುತ್ತಿರುವ ಬಿಎಸ್‌ಎನ್‌ಎಲ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಲೋಗೋ ಬದಲಿಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸಿದೆ.
ಬಿಎಸ್‌ಎನ್‌ಎಲ್‌ನಲ್ಲಿ ಈಗ ಆಟೋಮೇಟೆಡ್ ಸಿಮ್ ಕಿಯೋಸ್ಕ್ ಕೂಡ ಸೇರಿದೆ. ಇಲ್ಲಿ ದಿನದ 24 ಗಂಟೆಯೂ ಹೊಸ ಸಿಮ್ ಖರೀದಿಸಬಹುದು. ಅಪ್‌ಗ್ರೇಡ್ ಮಾಡಬಹುದು. ಪೋರ್ಟ್ ಮಾಡಬಹುದು. ಕ್ಯುಆರ್ ಕೋಡ್‌ನಲ್ಲೇ ಪೇಮೆಂಟ್ ಮಾಡಬಹುದು. ಸದ್ಯ 1.8 ಕೋಟಿ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರಿದ್ದಾರೆ.
ಈ ಹೊಸ ಲೋಗೋದಲ್ಲಿ ದೇಶ ಐಕ್ಯತೆ ಸಾರುವ ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿವೆ. ಬಿಎಸ್‌ಎನ್‌ಎಲ್ ಕನೆಕ್ಟಿಂಗ್ ಪೀಪಲ್ ಹಾಗೇ ಉಳಿಸಿಕೊಳ್ಳಲಾಗಿದೆ. ಅದರೊಂದಿಗೆ ‘ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ’ ಘೋಷವಾಕ್ಯದೊಂದಿಗೆ ಹೊಸ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ. ವೃತ್ತಾಕಾರದ ಕೇಸರಿ ಬಣ್ಣದಲ್ಲಿ ಭಾರತದ ನಕಾಶೆ ಇದೆ. ಟಿಲಿಕಾಂ ತರಂಗಗಳು ಸುತ್ತುವರಿದಿರುವಂತೆ ಎರಡು ಬಾಣದ ಗುರುತುಗಳಿದ್ದು, ಅದರಲ್ಲಿ ಒಂದು ಬಿಳಿ ಬಣ್ಣ, ಮತ್ತೊಂದು ಹಸಿರು ಬಣ್ಣದಲ್ಲಿದೆ. ಒಟ್ಟಾರೆ ಈ ಮೂರ ಬಣ್ಣಗಳು ರಾಷ್ಟ್ರಧ್ವಜವನ್ನು ಪ್ರತಿನಿಧಿಸುವಂತೆ ಲೋಗೋ ವಿನ್ಯಾಸ ಮಾಡಲಾಗಿದೆ.
ಜಿಯೋ, ಏರ್‌ಟೆಲ್ ಇನ್ನಿತರ ಖಾಸಗಿ ಟೆಲಿಕಾಂ ಸಂಸ್ಥೆಗಳು ಮೊಬೈಲ್ ರಿಚಾರ್ಜ್ ದರಗಳನ್ನು ದುಬಾರಿ ಮಾಡಿಕೊಂಡಿವೆ. ಆದರೆ ಬಿಎಸ್‌ಎನ್‌ಎಲ್ 1ದಿನ, 28, 85, 365 ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳು ಇತರ ಕಂಪನಿಗಳ ಪ್ಲಾನ್‌ಗಿಂತ ಕಡಿಮೆ ಇದೆ.