Budget2023| ಕೃತಕ ಬುದ್ಧಿಮತ್ತೆ ಅಧ್ಯಯನಕ್ಕೆ 3 ಕೇಂದ್ರಗಳ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ತಂತ್ರಜ್ಞಾನ ಕ್ಷೇತ್ರವು ʼಕೃತಕ ಬುದ್ಧಿಮತ್ತೆʼ (Artificial Intelligence) ಕಡೆಗೆ ಪ್ರಾಮುಖ್ಯತೆ ನೀಡುತ್ತಿದ್ದು ದೊಡ್ಡ ದೊಡ್ಡ ಕಂಪನಿಗಳೆಲ್ಲ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಅಪಾರ ಹೂಡಿಕೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಭಾರತವೂ ಕೃತಕ ಬುದ್ಧಿ ಮತ್ತೆಯ ವಿಷಯದಲ್ಲಿ ಸಂಶೋಧನೆ ಅಧ್ಯಯನ ನಡೆಸಲು ಒತ್ತು ನೀಡುತ್ತಿದ್ದು ಈ ವರ್ಷದ ಬಜೆಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಸಂಶೋಧನೆ ಮತ್ತು ಅಧ್ಯಯನಕ್ಕೆ 3 ಕೇಂದ್ರಗಳನ್ನು ಸ್ಥಾಪಿಸುವುದಾಗಿದೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂರು ಶ್ರೇಷ್ಠತೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರಗಳಮ್ಮು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

“ಪ್ರಮುಖ ಉದ್ಯಮ ಆಟಗಾರರು ಅಂತರ-ಶಿಸ್ತಿನ ಸಂಶೋಧನೆಗಳನ್ನು ನಡೆಸುವಲ್ಲಿ ಪಾಲುದಾರರಾಗುತ್ತಾರೆ, ಅತ್ಯಾಧುನಿಕ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಾರೆ ಮತ್ತು ಕೃಷಿ, ಆರೋಗ್ಯ ಮತ್ತು ಸುಸ್ಥಿರ ನಗರಗಳ ಕ್ಷೇತ್ರಗಳಲ್ಲಿ ಸಮಸ್ಯೆಗೆ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಇದು ಸಹಾಯಕವಾಗಲಿದೆ” ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!