Sunday, December 4, 2022

Latest Posts

ಗುರುಗ್ರಾಮ್‌ನಲ್ಲಿ ಕಟ್ಟಡ ಕುಸಿದು ಓರ್ವ ಸಾವು: ಮೂವರು ಅವಶೇಷಗಳಡಿ ಸಿಲುಕಿರುವ ಶಂಕೆ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಡವಲಾಗುತ್ತಿದ್ದ ಕಟ್ಟಡ ಕುಸಿದು ಓರ್ವ ಸಾವನ್ನಪ್ಪಿದ್ದು, ಮೂವರು ಅವಶೇಷಗಳಡಿ ಸಿಲುಕಿರುವ ಘಟನೆ ಸೋಮವಾರ ಗುರುಗ್ರಾಮ್‌ನ ಉದ್ಯೋಗ್ ವಿಹಾರ್ ಹಂತ I ರಲ್ಲಿ ನಡೆದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಡವಲಾಗುತ್ತಿದ್ದ ಕಟ್ಟಡವು ಕುಸಿದು ಬಿದ್ದಿದ್ದು, ಮೂವರು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಒಬ್ಬ ಕಾರ್ಮಿಕನನ್ನು ಈಗಾಗಲೇ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಲಲಿತ್ ಕುಮಾರ್ ಮಾಹಿತಿ ನೀಡಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಈ ಕಟ್ಟಡ ಹಳೆಯದಾಗಿದ್ದು, ಸೆಪ್ಟೆಂಬರ್ 26 ರಿಂದ ಕೆಡವಲಾಗುತ್ತಿದೆ. 3 ಮಹಡಿ ಎತ್ತರದ ಕಟ್ಟಡವಾಗಿದ್ದು, 2 ಮಹಡಿಗಳನ್ನು ಈಗಾಗಲೇ ಕೆಡವಲಾಗಿದೆ. ಉಳಿದ ಭಾಗ ಕೆಡವುತ್ತಿದ್ದ ಸಂದರ್ಭದಲ್ಲಿ ಕುಸಿದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ದೀಪಕ್ ಸಹರಾನ್ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!