SHOCKING VIDEO| ಭಾರೀ ಮಳೆಯಿಂದಾಗಿ ನೋಡ ನೋಡುತ್ತಿದ್ದಂತೆ ಕುಸಿದ ಕಟ್ಟಡಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾದ ಕುಲು ದುರಂತವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅಂದವಾಗಿದ್ದ ಕುಲು ಪ್ರದೇಶ ಅವಶೇಷಗಳಾಗಿ ಮಾರ್ಪಟ್ಟಿದೆ. ಬೆಟ್ಟಗಳ ಮೇಲಿನ ಸುಂದರ ಕಟ್ಟಡಗಳು ಕಲ್ಲುಗಳ ರಾಶಿಯಂತೆ ಕುಸಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಕಟ್ಟಡಗಳು ಎಲೆಗಳಂತೆ ಕೆಳಗೆ ಬೀಳುತ್ತಿವೆ.

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರವಾಹದಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ಹಲವೆಡೆ ಭೂಕುಸಿತ, ಅಪಘಾತಗಳೂ ಸಂಭವಿಸುತ್ತಿದ್ದು, ರಸ್ತೆಗಳು ಬ್ಲಾಕ್ ಆಗುತ್ತಿವೆ. ಗುರುವಾರ (ಆಗಸ್ಟ್ 24, 2023) ಕುಲುವಿನಲ್ಲಿ ಹಲವು ಕಟ್ಟಡಗಳು ಕುಸಿದಿವೆ. ಕಣ್ಣೆದುರೇ ಕುಸಿದು ಬೀಳುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಟ್ಟಡಗಳು ಕುಸಿಯುತ್ತಿರುವ ಭೀತಿಯಿಂದಾಗಿ, ಆ ಪ್ರದೇಶಗಳಲ್ಲಿ ವಾಸಿಸುವುದು ಅಪಾಯಕಾರಿಯಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಎರಡು ದಿನಗಳ ಹಿಂದೆಯೇ ಆ ಭಾಗದ ಜನರನ್ನು ಸ್ಥಳಾಂತರಿಸಿದ್ದು, ದೊಡ್ಡ ಅನಾಹುತ ತಪ್ಪಿದೆ. ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಯಾರೋ ಆಕಸ್ಮಿಕವಾಗಿ ಸಿಕ್ಕಿಬಿದ್ದಿದ್ದಾರೆಂದು ಶಂಕಿಸಲಾಗಿದೆ. ಅವರನ್ನು ಉಳಿಸಲು ಎನ್‌ಡಿಆರ್‌ಎಫ್ ತಂಡಗಳೊಂದಿಗೆ ಎಸ್‌ಡಿಆರ್‌ಎಫ್ ತಂಡಗಳು ಈಗಾಗಲೇ ಅಲ್ಲಿಗೆ ತಲುಪಿವೆ. ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!