ಹೊಸದಿಗಂತ ಡಿಜಿಟಲ್ ಡೆಸ್ಕ್
ಗುಜರಾತ್ ನಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ರ್ಯಾಲಿ, ಪ್ರಚಾರ ಸಭೆ ನಡೆಸಿ ಎದುರಾಳಿಗಳಿಗೆ ಸೆಡ್ಡು ಹೊಡೆಯುತ್ತಿವೆ. ಈ ನಡುವೆ ಕಾಗ್ರೆಸ್ ಸಭೆಯೊಂದಲಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಗುಜರಾತ್‌ನ ಮೆಹ್ಸಾನಾದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ಚುನಾವಣಾ ಪ್ರಚಾರ ಸಭೆ ಇತ್ತು. ಅಲ್ಲಿ ಅಶೋಕ್ ಗೆಹ್ಲೋಟ್ ಭಾಷಣ ಮಾಡುತ್ತಿದ್ದಾಗ ಗೂಳಿಯೊಂದು ಏಕಾಏಕಿ ಅತ್ತ ಓಡಿಬಂದಿದೆ. ಸಭೆಯಲ್ಲಿ ಗೂಳಿಯನ್ನು ನೋಡುತ್ತಿದ್ದಂತೆ ಸಭಿಕರು ಕಕ್ಕಾಬಿಕ್ಕಿಯಾಗಿ ದಿಕ್ಕಾಪಾಲಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಗೂಳಿ ಅಲ್ಲಿ ಇಲ್ಲಿ ಓಡುತ್ತಿದ್ದು, ಅದನ್ನು ತಪ್ಪಿಸಲು ಜನರು ಓಡುತ್ತಿದ್ದಾರೆ. ಇಷ್ಟೆಲ್ಲಾ ಗದ್ದಲದ ನಡುವೆ ಅಶೋಕ್ ಗೆಹ್ಲೋಟ್ ವೇದಿಕೆಯಿಂದ ಶಾಂತವಾಗಿರುವಂತೆ ಜನರಿಗೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಗದ್ದಲಗಳು ತಣ್ಣಗಾದ ವೇದಿಕೆಯಿಳಿದು ಬಂದ ಗೆಹ್ಲೋಟ್ ಇದು ಬಿಜೆಪಿಯ ಷಡ್ಯಂತ್ರ, ಸಭೆಗೆ ಅಡ್ಡಿಪಡಿಸಲು ಬಿಜೆಪಿಯವರು ಈ ಗೂಳಿಯನ್ನು ಕಳುಹಿಸಿದ್ದಾರೆ ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ.
गुजरात मे @ashokgehlot51 की सभा में घुसा सांड!!
सीएम बोले…. मैं बचपन से देखता आ रहा हूं, ये भाजपा भेजती है मेरी सभा में सांडों को. pic.twitter.com/RkB8oSmowx— Sharad (@DrSharadPurohit) November 28, 2022
ಕಾಂಗ್ರೆಸ್ ಸಭೆ ನಡೆದಾಗಲೆಲ್ಲ ಈ ಬಿಜೆಪಿಗರು ಗೂಳಿ, ಹಸು ಬಿಡುವುದನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಭೆಗಳಿಗೆ ಅಡ್ಡಿಪಡಿಸಲು ಇಂತಹ ಇನ್ನಷ್ಟು ತಂತ್ರಗಳನ್ನು ಅನುಸರಿಸಲಿದೆ. ಗೂಳಿ ಸಭೆಗೆ ಪ್ರವೇಶಿಸಿದಾಗ ಗೊಂದಲ ಉಂಟಾಯಿತು. ಆದರೂ ಪರವಾಗಿಲ್ಲ ಬಿಜೆಪಿಯ ಇಂತಹ ತಂತ್ರಗಳನ್ನು ಎದುರಿಸಲು ನಾವು ಸಶಕ್ತರಿದ್ದೇವೆ ಎಂದು ಗೆಹ್ಲೋಟ್ ಹೇಳಿದ್ದಾರೆ.