ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಗಲಭೆಗಳನ್ನು ಹತ್ತಿಕ್ಕಲು ಯೋಗಿ ಸರ್ಕಾರ ಶಹರಾನ್ಪುರದಲ್ಲಿ ಬುಲ್ಡೋಜರ್ಗಳನ್ನು ಫೀಲ್ಡಿಗಿಳಿಸಿದೆ. ನಮಾಜ್ ಬಳಿಕ ಉಂಟಾದ ಗಲಭೆಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದು, ಅಶಾಂತಿ ಸೃಷ್ಟಿಗೆ ಕಾರಣರಾದ ಇಬ್ಬರು ಮಾಸ್ಟರ್ಮೈಂಡ್ಗಳ ಮನೆಗಳನ್ನು ಅಧಿಕಾರಿಗಳು ಕೆಡವಿದ್ದಾರೆ. ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಮನೆಗಳನ್ನು ತೆರವುಗೊಳಿಸಿದ್ದಾರೆ.
ಪ್ರವಾದಿ ವಿರುದ್ಧ ಹೇಳಿಕೆಗೆ ಶಹರಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಅಶಾಂತಿ ವಾತಾವರಣ ಸೃಷ್ಟಿ ಮಾಡಿದ್ದರು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು 227 ಜನರನ್ನು ಬಂಧಿಸಿದ್ದಾರೆ. ಈ ಗಲಭೆಗೆ ಪ್ರಮುಖವಾಗಿ ಶಹರಾನ್ಪುರದ ಇಬ್ಬರು ಮಾಸ್ಟರ್ಮೈಂಡ್ಗಳು ಕಾರಣ ಎಂದು ತಿಳಿದುಬಂದಿದೆ. ಇಬ್ಬರ ವಿಚಾರಣೆ ವೇಳೆ ಅವರು ವಾಸವಾಗಿದ್ದ ಮನೆ ಅಕ್ರಮವಾಗಿ ನಿರ್ಮಾಣ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಕೂಡಲೇ ಅಧಿಕಾರಿಗಳು ಬುಲ್ಡೋಜರ್ಗಳ ಸಹಾಯದಿಂದ ಮನೆಗಳನ್ನು ತೆರವುಗೊಳಿಸಿದ್ದಾರೆ.