ಜನ್ಮ ನೀಡಿದ ಮೂರು ವರ್ಷದ ಬಳಿಕ ಅಮ್ಮನ ಮಡಿಲು ಸೇರಿದ ಮಗು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಗುವಿಗೆ ಜನ್ಮನೀಡಿ ಮೂರು ವರ್ಷಗಳ ಬಳಿಕ ತಾಯಿ ಮಗುವಿನೊಂದಿಗೆ ಒಂದಾದ ಘಟನೆ ಅಸ್ಸಾಂನ ಬಾರ್ಪೆಟಾದಲ್ಲಿ ನಡೆದಿದೆ.

ಬಾರ್ಪೆಟಾದ ಆಸ್ಪತ್ರೆಯೊಂದರಲ್ಲಿ ಮೂರು ವರ್ಷದ ಹಿಂದೆ ಒಂದೇದಿನ ನಜ್ಮಾ ಖಾನಮ್‌ ಮತ್ತು ನಜ್ಮಾ ಖಾತುನ್‌ ಎಂಬ ಒಂದೇ ಹೆಸರಿನ ಇಬ್ಬರು ಮಹಿಳೆಯರು ದಾಖಲಾಗಿದ್ದರು. ಅವರು ಎರಡು ಶಿಶುಗಳಿಗೆ ಜನ್ಮ ನೀಡಿದ್ದು ಅದರಲ್ಲಿ ಒಂದು ಮಗು ಹುಟ್ಟುವಾಗಲೇ ಪ್ರಾಣಕಳೆದುಕೊಂಡಿತ್ತು.

ಹೆಸರಿನ ಸಾಮ್ಯತೆಯಿಂದಾಗಿ ನಿಜವಾದ ತಾಯಿ ನಜ್ಮಾ ಖಾನಮ್‌ ರ ಮಗುವನ್ನು ಇನ್ನೊಬ್ಬ ಮಹಿಳೆ ನಜ್ಮಾ ಖಾತುನ್‌ ಅವರಿಗೆ ನೀಡಲಾಗಿತ್ತು. ತಾನು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದೇನೆ, ತನ್ನ ಮಗು ಸಾಯಲು ಸಾಧ್ಯವಿಲ್ಲವೆಂದು ಆಕೆ ಕಾನೂನಿನ ಮೊರೆ ಹೋಗಿದ್ದರು.

ನಜ್ಮಾ ಖಾನಮ್ ಅವರ ಕುಟುಂಬ ಸದಸ್ಯರು ಬಾರ್ಪೇಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೆಸರಿನ ಸಾಮ್ಯತೆಯಿಂದಾಗಿ ಜೀವಂತ ಮಗುವನ್ನು ನಜ್ಮಾ ಖಾನಮ್ ಬದಲಿಗೆ ಗೊಸ್ಸೈಗಾಂವ್ ಪ್ರದೇಶದ ನಜ್ಮಾ ಖಾತುನ್ ಎಂಬ ಮಹಿಳೆಗೆ ಹಸ್ತಾಂತರಿಸಿರುವುದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಈ ವೇಳೆ ಡಿಎನ್‌ಎ ಪರೀಕ್ಷೆ ನಡೆಸಿ ನಿಜವಾದ ತಾಯಿಗೆ ಮಗುವನ್ನು ಹಸ್ತಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!