ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌ಗಳ ಬಳಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ತೀವ್ರ ಮಾತಿನ ಸಮರ ನಡೆದಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಮುಖ್ಯಸ್ಥರ ಬುಲ್ಡೋಜರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
2027ರಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಸರ್ಕಾರ ರಚನೆಯಾದ ಬಳಿಕ ಇಡೀ ರಾಜ್ಯದ ಬುಲ್ಡೋಜರ್‌ಗಳು ಗೋರಖ್‌ಪುರದತ್ತ ಸಾಗಲಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಯೋಗಿ ಆದಿತ್ಯನಾಥ್ ಉತ್ತರ ನೀಡಿದ್ದಾರೆ.
ಬುಲ್ಡೋಜರ್ ಅನ್ನು ನಿರ್ವಹಿಸಲು ಕೇವಲ ದೈಹಿಕ ಶಕ್ತಿಗಿಂತ ಹೆಚ್ಚಿನದು ಅಗತ್ಯವಿದೆ. ಇದು ಬುದ್ಧಿ ಮತ್ತು ಧೈರ್ಯ ಎರಡನ್ನೂ ಬೇಡುತ್ತದೆ. ಬುಲ್ಡೋಜರ್ ಅನ್ನು ನಿರ್ವಹಿಸಲು ಎಲ್ಲರೂ ಸೂಕ್ತವಲ್ಲ. ಇದು ಮಾನಸಿಕ ಮತ್ತು ದೈಹಿಕ ಶಕ್ತಿ ಎರಡರ ಸಂಯೋಜನೆಯನ್ನು ಕೇಳುತ್ತದೆ ಎಂದು ಒತ್ತಿಹೇಳಿದರು.
ಯಾವುದೇ ನಾಯಕರ ಹೆಸರು ಹೇಳದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು, ಬುಲ್ಡೋಜರ್ ಮೇಲೆ ಎಲ್ಲರ ಕೈ ಒಗ್ಗೋದಿಲ್ಲ. ಬುಲ್ಡೋಜರ್ ಓಡಿಸಲು ಹೃದಯ ಮತ್ತು ಮನಸ್ಸು ಎರಡೂ ಬೇಕು, ಗಲಭೆಕೋರರ ಮುಂದೆ ಮಂದ ಆಗುವವರು ಬುಲ್ಡೋಜರ್ ಮುಂದೆ ಸೋಲುತ್ತಾರೆ ಎಂದು ಹೇಳಿದರು.
ಲೋಹಿಯಾ ಸಭಾಂಗಣದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಅಖಿಲೇಶ್ ಯಾದವ್, 2027 ರ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ರಾಜಕೀಯ ಬದಲಾವಣೆಯನ್ನು ಯೋಜಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಉತ್ತರ ಪ್ರದೇಶದಿಂದ ಹೊರಹಾಕುತ್ತೇವೆ ಎಂದ ಅವರು, ಈ ಫಲಿತಾಂಶಗಳು ರಾಷ್ಟ್ರೀಯ ಪರಿಣಾಮಗಳನ್ನು ಬೀರುತ್ತವೆ ಎಂದು ಭವಿಷ್ಯ ನುಡಿದರು. ಅದರೊಂದಿಗೆ ಬಿಜೆಪಿಯ ಭದ್ರಕೋಟೆಯ ಮೇಲೆ ಬುಲ್ಡೋಜರ್ ಕ್ರಮದ ಸುಳಿವನ್ನೂ ನೀಡಿದ್ದರು.