ಯುಪಿಯಲ್ಲಿ ಮತ್ತೆ ಕೇಳಿಸಿತು ಬುಲ್ಡೋಜರ್‌ ಸದ್ದು: ಹಾಡಹಗಲೇ ಗುಂಡು ಹಾರಿಸಿದತನ ಹೊಟೇಲ್ ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಬರೇಲಿಯಲ್ಲಿ ನಡು ರಸ್ತೆಯಲ್ಲೇ ಗುಂಡು ಹಾರಿಸಿದ ದುಷ್ಕರ್ಮಿಗಳ ಮನೆಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶ ಮೇರೆಗೆ ಬುಲ್ಡೋಜರ್‌ಗಳ ಮೂಲಕ ಗುರುವಾರ (ಜೂನ್‌ 27) ಧ್ವಂಸಗೊಳಿಸಲಾಗಿದೆ.

ಬಿಜೆಪಿ ಮಾಜಿ ಶಾಸಕ ಪಪ್ಪು ಭರ್ತೌಲ್‌ ಅವರ ಆಪ್ತ ರಾಜೀವ್‌ ರಾಣಾ ಎಂಬುವರ ಹೊಟೇಲ್ ಅನ್ನು ಹತ್ತಾರು ಬುಲ್ಡೋಜರ್‌ಗಳು ನೆಲಸಮಗೊಳಿಸಿವೆ. ರಾಜೀವ್‌ ರಾಣಾ ಅವರು ಬರೇಲಿಯಲ್ಲಿ ಸಿಟಿ ಸ್ಟಾರ್‌ ಹೊಟೇಲ್ ಮಾಲೀಕರಾಗಿದ್ದು, ಇದನ್ನು ಅಕ್ರಮವಾಗಿ ನಿರ್ಮಿಸಿರುವ ಕಾರಣ ಧ್ವಂಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ರಾಜೀವ್‌ ರಾಣಾ ವಿರುದ್ಧ ಭೂಮಾಫಿಯಾದಲ್ಲಿ ತೊಡಗಿರುವ ಆರೋಪಗಳಿವೆ. ಅಲ್ಲದೆ, ಕೆಲ ದಿನಗಳ ಹಿಂದೆ ಬರೇಲಿಯಲ್ಲಿ ಮಿರ್ಜಾಪುರ ಮಾದರಿಯಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ, ಭೂ ಮಾಫಿಯಾ ಮಟ್ಟಹಾಕಲು ಬುಲ್ಡೋಜರ್‌ಗಳನ್ನು ಬಳಸಲಾಗಿದೆ.

ಬರೇಲಿಯ ಇಜ್ಜತ್‌ ನಗರದ ಸುತ್ತಮುತ್ತಲೂ ಲ್ಯಾಂಡ್‌ ಮಾಫಿಯಾ ಜೋರಾಗಿದೆ. ಸುತ್ತಲೂ ಗೂಂಡಾಗಳನ್ನು ಇಟ್ಟುಕೊಂಡವರು, ದುಡ್ಡು ಇರುವವರು ಬಡವರ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ರಾಜೀವ್‌ ರಾಣಾ ಕೂಡ ಇಜ್ಜತ್‌ ನಗರದಲ್ಲಿ ಹೀಗೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಲ್ಲದೆ, ಇತ್ತೀಚೆಗೆ ನಡು ರಸ್ತೆಯಲ್ಲೇ ಗುಂಡು ಹಾರಿಸಿದ್ದರು. ಹಲವು ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಗುಂಡಿನ ದಾಳಿ-ಪ್ರತಿದಾಳಿ ನಡೆಸಿದ್ದು ಜನರಲ್ಲಿ ಆತಂಕ ಮೂಡಿಸಿತ್ತು.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರು ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆಗಾಗ ಕ್ರಿಮಿನಲ್‌ಗಳಿಗೆ ಎಚ್ಚರಿಕೆಯನ್ನೂ ಅವರು ನೀಡುತ್ತಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!