April 16, 2026
Thursday, April 16, 2026
spot_img

ಗದಗದ ರೈತನಿಗೆ ಬಂಪರ್‌, ಕ್ವಿಂಟಾಲ್ ಮೆಣಸಿನಕಾಯಿಗೆ ಬರೋಬ್ಬರೀ 74 ಸಾವಿರ ಬೆಲೆ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗದಗದ ಲಕ್ಕುಂಡಿ ಗ್ರಾಮದ ರೈತನೊಬ್ಬನಿಗೆ ಬಂಪರ್‌ ಬೆಲೆ ಸಿಕ್ಕಿದೆ. ತಾನೇ ಬೆಳೆದಿದ್ದ ಒಣಮೆಣಸಿನ ಕೊಯ್ಲಿಗೆ ಒಳ್ಳೆ ಆಫರ್‌ ಸಿಕ್ಕಿದೆ.

ಚಂದ್ರು ಚಬರಭಾವಿ ತಾವು ಬೆಳೆದ ಮೆಣಸಿನಕಾಯಿ ಬೆಳೆಗೆ ಕ್ವಿಂಟಾಲ್‌ಗೆ 74,099 ರೂ. ಗಳ ಅಚ್ಚರಿಯ ಬೆಲೆಯನ್ನು ಗಳಿಸಿದ್ದಾರೆ.

ಅವರು ಕಾಶ್ಮೀರ ಡಬ್ಬಾ ವಿಧದ ಮೆಣಸಿನಕಾಯಿಯನ್ನು ಬೆಳೆದಿದ್ದಾರೆ, ಹಸುವಿನ ಸಗಣಿಯನ್ನು ಮಾತ್ರ ಗೊಬ್ಬರವಾಗಿ ಬಳಸುತ್ತಿದ್ದರು. ಸಾಮಾನ್ಯವಾಗಿ, ಮೆಣಸಿನಕಾಯಿ ಬೆಲೆಗಳು ಕ್ವಿಂಟಾಲ್‌ಗೆ 35,000 ರಿಂದ 50,000 ರೂ.ಗಳ ನಡುವೆ ಇರುತ್ತದೆ ಉತ್ತಮ ಬೆಲೆ ಬೇಕೇಂದರೆ ಫಸಲು ಉತ್ತಮ ಗುಣಮಟ್ಟ ಇರಬೇಕಾಗಿರುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಗರಿಷ್ಠ ಮಟ್ಟದ ಬೆಲೆ ಇದಾಗಿದೆ. ಜನವರಿ 2023 ರಲ್ಲಿ, ಕೊಟುಮಚಗಿಯ ರೈತ ಶರಣಪ್ಪ 70,499 ರೂ.ಗಳನ್ನು ಪಡೆದಿದ್ದರು, ಆದರೆ ಚಂದ್ರು ಈಗ ತಮ್ಮ ಬೆಳೆಗೆ 74,099 ರೂ. ಬೆಲೆ ಪಡೆದಿದ್ದಾರೆ. ತಮ್ಮ ಬೆಳೆಗೆ ದಾಖಲೆಯ ಬೆಲೆ ಸಿಕ್ಕಿದ್ದಕ್ಕೆ ಲಕ್ಕುಂಡಿಯ ಜನರಿಗೆ ಸಿಹಿತಿಂಡಿಗಳನ್ನು ವಿತರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !