ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭಮೇಳದಿಂದ ನಾವಿಕರ ಕುಟುಂಬಕ್ಕೆ ಬಂಪರ್ ಆಫರ್ ಸಿಕ್ಕಿದ್ದು, ಒಟ್ಟಾರೆ 45ದಿನಗಳಲ್ಲಿ ಕುಟುಂಬ ಮೂವತ್ತು ಕೋಟಿ ರೂ.ನಷ್ಟು ಆದಾಯ ಕಂಡಿದೆ.
ನಾವಿಕ ಕುಟುಂಬವು ಪ್ರಯಾಗ್‌ರಾಜ್‌ನ ನೈನಿಯ ಅರೈಲ್‌ನವರು. ಈ ಕುಟುಂಬದ ಮುಖ್ಯ ಕಸುಬು ದೋಣಿ ನಡೆಸುವುದು. ಮಹಾಕುಂಭದಲ್ಲಿ ಸುಮಾರು 66 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಇದರಿಂದಾಗಿ ಈ ಕುಟುಂಬಕ್ಕೆ 45 ದಿನಗಳ ಕಾಲ ಕೆಲಸ ಸಿಕ್ಕಿತು ಮತ್ತು ಅವರ ದೋಣಿ ಒಂದು ದಿನವೂ ಖಾಲಿಯಾಗಿರಲಿಲ್ಲ ಎಂದು ಕುಟುಂಬದವರು ಸಂತಸದಿಂದ ಹೇಳಿಕೊಂಡಿದ್ದಾರೆ.
ಈ ಕುಟುಂಬವು ನೂರಕ್ಕೂ ಹೆಚ್ಚು ದೋಣಿಗಳನ್ನು ಹೊಂದಿದ್ದು, ಪ್ರತಿ ದೋಣಿಯು 7 ರಿಂದ 10 ಲಕ್ಷ ರೂ.ಗಳ ವಹಿವಾಟು ನಡೆಸುತ್ತದೆ. ಗಳಿಸಿದ ಒಟ್ಟು ಮೊತ್ತವನ್ನು ಸೇರಿಸಿದರೆ, ಅದು ಸುಮಾರು 30 ಕೋಟಿ ರೂ.ಗಳಾಗುತ್ತದೆ. ಈ ರೀತಿಯಾಗಿ, ಇಡೀ ಕುಟುಂಬ ಸುಮಾರು 30 ಕೋಟಿ ರೂ.ಗಳನ್ನು ಗಳಿಸಿದೆ.