ಹೊಸದಿಗಂತ ಡಿಜಿಟಲ್ ಡೆಸ್ಕ್:
8ನೇ ವೇತನ ಆಯೋಗಕ್ಕೂ ಮುನ್ನವೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ವಿಶೇಷ ಗಿಫ್ಟ್ ನೀಡಿದೆ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಏರಿಕೆ ಮಾಡಿದೆ.
ಶೇ. 2ರಷ್ಟು ಡಿಎ ಏರಿಕೆಯಿಂದ ಕೇಂದ್ರ ಸರ್ಕಾರದ ಖಜಾನೆಗೆ 6614 ಕೋಟಿ ರೂಪಾಯಿ ಹೊರೆ ಬೀಳಲಿದೆ. ಇದರಲ್ಲಿ ವೇತನದಾರರಿಗೆ 3622 ಕೋಟಿ ವೆಚ್ಚವಾಗಲಿದ್ದರೆ, ಪಿಂಚಣಿದಾರರ ಡಿಎಗೆ 2992 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳವನ್ನು ನಿರ್ಧರಿಸಲಾಯಿತು. ಇದಕ್ಕೂ ಮೊದಲು, ಜುಲೈ 2024 ರಲ್ಲಿ, ಸರ್ಕಾರವು ತುಟ್ಟಿ ಭತ್ಯೆಯನ್ನು 3% ರಷ್ಟು ಹೆಚ್ಚಿಸಿತ್ತು. ಈ ಹೆಚ್ಚಳವು ತುಟ್ಟಿ ಭತ್ಯೆಯನ್ನು 53% ರಿಂದ 55% ಕ್ಕೆ ಹೆಚ್ಚಿಸುತ್ತದೆ. ಸುಮಾರು 48 ಲಕ್ಷ ಕೇಂದ್ರ ನೌಕರರು ಮತ್ತು 66 ಲಕ್ಷ ಪಿಂಚಣಿದಾರರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ.