ದಿನಭವಿಷ್ಯ: ಮನೆ ಖರೀದಿಗೆ ಮನಸ್ಸು ಮಾಡಿದ್ದೀರಾ? ಖಂಡಿತಾ ಮುಂದುವರಿಯಿರಿ ಇದು ಬೆಸ್ಟ್‌ ಡಿಸಿಶನ್‌!

ಮೇಷ
ಕೆಲವು ವಿಷಯ ಮನಸ್ಸಿನಲ್ಲಿ ಕೊರಗು ಮೂಡಿಸುವುದು. ಅದನ್ನು ಆಪ್ತರ ಜತೆ ಹಂಚಿಕೊಂಡರೆ ನಿರಾಳವಾದೀತು.

ವೃಷಭ
ಎಲ್ಲ ವಿಷಯದಲ್ಲಿ  ನಿಮಗೆ ಇಂದು ಯಶಸ್ಸು ಸಿಗಲಿದೆ. ಆಪ್ತರ ಜತೆಗಿನ ವಿರಸ ನಿವಾರಣೆ. ಹೊಂದಾಣಿಕೆಯಿಂದ ವರ್ತಿಸಿರಿ.

ಮಿಥುನ
ಸಂತೋಷ, ಸಮಾಧಾನದ ದಿನ. ನೀವು ನಿರೀಕ್ಷಿಸಿದ ಕಾರ್ಯ ಈಡೇರಿಕೆ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಕೌಟುಂಬಿಕ ಸೌಹಾರ್ದ.

ಕಟಕ
ಮನೆಯಲ್ಲಿ ಬಿಗುವಿನ ವಾತಾವರಣ. ನೀವೇ ಸಡಿಲಿಸಬೇಕು. ಬಿಗುಮಾನ ಬಿಟ್ಟು ವ್ಯವಹರಿಸಿ.  ಹೊಂದಾಣಿಕೆ ಅತಿ ಮುಖ್ಯ.

ಸಿಂಹ
ಮನೆ ಖರೀದಿಗೆ ಮನಸು ಮಾಡಿದ್ದರೆ ಪೂರಕ ಬೆಳವಣಿಗೆ. ನಿಮ್ಮ ಇಚ್ಛೆಯಂತೆ ನೆರವೇರುವುದು. ಕೌಟುಂಬಿಕ ಸೌಹಾರ್ದ.

ಕನ್ಯಾ
ಸಂವಹನದ ಕೊರತೆಯಿಂದ ಆಪ್ತರ ಜತೆ ಭಿನ್ನಾಭಿಪ್ರಾಯ. ತಪ್ಪು ಗ್ರಹಿಕೆ ನೀಗಲು ಆದ್ಯತೆ ಕೊಡಿ. ಸಂಘರ್ಷಕ್ಕೆ ಅವಕಾಶ ಕೊಡದಿರಿ.

ತುಲಾ
ಮನೆಯಲ್ಲಿ ನೆಮ್ಮದಿ. ನಿಮ್ಮ ಸಾಧನೆ ಇತರರನ್ನು ಪ್ರಭಾವಿಸುತ್ತದೆ. ಅವಿವಾಹಿತರಿಗೆ ಸಂಬಂಧ ಕೂಡಿಬಂದೀತು.  ಬಂಧುಗಳ ಭೇಟಿ.

ವೃಶ್ಚಿಕ
ನಿರಾಳ ದಿನ. ಹೆಚ್ಚು ಕಾರ್ಯದೊತ್ತಡ ಇರಲಾರದು. ಕುಟುಂಬ ಸದಸ್ಯರ ಸಂಗಡ ಕಾಲ ಕಳೆಯುವ ಅವಕಾಶ. ಆರ್ಥಿಕ ಸ್ಥಿತಿ ಉತ್ತಮ.

ಧನು
ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಮೌನವಾಗಿ ಸಹಿಸ ಬೇಕಾಗುವುದು. ವಿವಾದಕ್ಕೆ ಹೋಗದಿರಿ.

ಮಕರ
ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಸಂಭವ.ಸಮಾಧಾನದಿಂದ ನಿಭಾಯಿಸಿ. ಕೋಪತಾಪ ಒಳಿತಲ್ಲ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಕುಂಭ
ನಿಮ್ಮ ಸಾಮರ್ಥ್ಯದ ಅಭಿವ್ಯಕ್ತಿಗೆ ಅವಕಾಶ ಸಿಗುವುದು. ಆರ್ಥಿಕ ಸ್ಥಿರತೆ. ಬಂಧುಗಳ ಜತೆ ವಿರಸ ಸಂಭವ. ಸಂಯಮ ಅವಶ್ಯ.

ಮೀನ
ಯಶಸ್ಸಿಗೆ ಅಡ್ಡದಾರಿ ಹಿಡಿಯದಿರಿ. ಪ್ರತಿಕೂಲ ಪರಿಣಾಮ ಉಂಟಾದೀತು. ಹಿಂದೆ ಮಾಡಿದ ತಪ್ಪು ಈಗ ಕಾಡಬಹುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!