ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಡೇಜ್ ಪಂದ್ಯ ಗೆಲಲ್ಲು ಎರಡು ಟೀಮ್ಗಳು ಪೈಪೋಟಿ ನಡೆಸಿದ್ದು , ಇದರ ನಡುವೆ ಮಹತ್ವ ಪಂದ್ಯ ವೀಕ್ಷಣೆಗೆ ಟೀಮ್ ಇಂಡಿಯಾ ಯುವ ಪ್ಲೇಯರ್ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಜಸ್ಪ್ರಿತ್ ಬೂಮ್ರಾ, ಸೂರ್ಯ ಕುಮಾರ್ ಯಾದವ್ ಹಾಗೂ ನಟ ಚಿರಂಜೀವಿ ಕೂಡ ಆಗಮಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯ ಎಂದರೆ ವಿಶ್ವದ ಎಂತಹ ವ್ಯಕ್ತಿಗೆ ಆಗಿರಲಿ ಸಖತ್ ಕುತೂಹಲ ಇರುತ್ತದೆ. ಕ್ರಿಕೆಟ್ನಲ್ಲಿ ಬೇರೆ ಬೇರೆ ರಾಷ್ಟ್ರಗಳು ಆಡುವುದಕ್ಕಿಂತ ಇಂಡಿಯಾ- ಪಾಕಿಸ್ತಾನ ಪಂದ್ಯಕ್ಕೆ ಹೆಚ್ಚಿನ ಮಹತ್ವ ಇದೆ. ಈ ಎರಡು ಟೀಮ್ಗಳು ಆಡುವುದನ್ನು ಸಾಕಷ್ಟು ಜನ ವೀಕ್ಷಣೆ ಮಾಡುತ್ತಿದ್ದಾರೆ.
ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂ ಗ್ಯಾಲರಿಯಲ್ಲಿ ಟಿ20ಯ ಹೊಡಿಬಡಿ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಜೊತೆಯಲ್ಲೇ ಕಾಣಿಸಿಕೊಂಡಿದ್ದಾರೆ. ಇನ್ನು ಸೂರ್ಯ ಕುಮಾರ್ ಯಾದವ್ ಕೂಡ ಕುಟುಂಬ ಕೂತೆ ಆಗಮಿಸಿದ್ದು, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕೂಡ ಮ್ಯಾಚ್ ನೋಡಲು ಆಗಮಿಸಿದ್ದಾರೆ.
ಸದ್ಯ ಇವರು ಪಂದ್ಯ ವೀಕ್ಷಣೆ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಸದ್ಯ ಇಂಜುರಿಗೆ ಒಳಗಾಗಿರುವ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಅವರು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ನು ನೋವಿನ ಗಾಯಕ್ಕೆ ಒಳಗಾಗಿರುವ ಅವರು ಚಾಂಪಿಯನ್ ಟ್ರೋಫಿಗೆ ಆಯ್ಕೆ ಆಗಿಲ್ಲ. ಪಂದ್ಯ ವೀಕ್ಷಣೆಗೆ ಆಗಮಿಸಿದ ಬೆನ್ನಲ್ಲೇ ಬೂಮ್ರಾಗೆ 2024ರ ಸಾಲಿನ 4 ಐಸಿಸಿ ಪ್ರಶಸ್ತಿಗಳನ್ನು ಇದೇ ವೇಳೆ ಜಯ್ ಶಾ ಅವರು ಪ್ರದಾನ ಮಾಡಿದರು.