ಹೊಸದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ದೊಡ್ಡಹಟ್ಟಿಯಲ್ಲಿ ಹಾಡುಹಗಲೇ ಮನೆ ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ನಾಣ್ಯ, ಚಿನ್ನಾಭರಣ ದೋಚಿರುವ ಘಟನೆ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊನ್ನವಳ್ಳಿ ಗ್ರಾಮದ ದೊಡ್ಡಹಟ್ಟಿಯೂ ಸದಾ ಜನನಿಭೀಡ ಪ್ರದೇಶವಾಗಿದ್ದು, ದೊಡ್ಡಹಟ್ಟಿಯ ಮಂಜುನಾಥ್ ಬಿನ್ ತಮ್ಮೇಗೌಡ ಎಂಬುವವರ ಮನೆಗೆ 19ರ ಬುಧವಾರ ಮಧ್ಯಾಹ್ನ 1.00ಗಂಟೆ ಸಮಯದಲ್ಲಿ ಮನೆ ಬೀಗಮುರಿದ ಕಳ್ಳರು ಸಮಾರು ಒಂದು ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ವಿನಾಯಕ ಎಸ್ ಶೆಟಿಗೇರಿ, ಗ್ರಾಮಾಂತರ ವೃತ್ತ ನಿರೀಕ್ಷಕರಾದ ಚಂದ್ರಶೇಖರ್ , ಹೊನ್ನವಳ್ಳಿ ಸಬ್ ಇನ್ಸ್ ಪೆಕ್ಟರ್ ರಾಜೇಶ್ ಹಾಗೂ ಬೆರಳಚ್ಚು ತಜ್ಞರು, ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಾಡುಹಗಲೇ ಮನೆ ಕಳ್ಳತನ ಮಾಡಿರುವುದು, ಗ್ರಾಮಸ್ಥರಲ್ಲಿ ಆತಂಕ ಭಯದ ವಾತವರಣ ಉಂಟುಮಾಡಿದೆ.