ಬೆಂಗಳೂರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಕೆಂಗೇರಿ ರಾಮಸಂದ್ರದಲ್ಲಿ ಮಹಿಳೆಯೊಬ್ಬಳ ದೇಹ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ‌‌.
ಸದ್ಯ ಕೊಲೆಯಾದವರು ಯಾರು ಅನ್ನೋದು ಗೊತ್ತಾಗ್ತಿಲ್ಲ. ಆದ್ರೆ ಕೊಲೆ ಮಾಡಿ ನಂತರ ಬೆಂಕಿ ಹಚ್ಚಿರೋದು ಸ್ಪಷ್ಟವಾಗ್ತಿದೆ. ಈ ಹತ್ಯೆಗೂ ಮೊದಲು ಅತ್ಯಾಚಾರ ಏನಾದ್ರೂ ನಡೆದಿದ್ಯಾ ಅನ್ನೋ ಶಂಕೆ ಇದ್ದು ತನಿಖೆ ನಡೆಯುತ್ತಿದೆ.
ಇಂದು ಬೆಳಗ್ಗೆ ಸ್ಥಳೀಯರೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿದ್ರು.ಒಂದು ಮೃತದೇಹ ಸುಟ್ಟ ಸ್ಥಿತಿಯಲ್ಲಿ ರಾಮಸಂದ್ರ ನೈಸ್ ರಸ್ತೆ ಪಕ್ಕದಲ್ಲಿ ಬಿದ್ದಿದೆ ಅಂತಾ ಹೇಳಿದರು. ತಕ್ಷಣ ಸ್ಥಳಕ್ಕೆ ಬಂದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ‌.
ಈ ವೇಳೆ ಅಲ್ಲಿ ಹೆಣವಾಗಿದ್ದು 25 ರಿಂದ 30 ವರ್ಷದ ಮಹಿಳೆ ಅನ್ನೋದು ಗೊತ್ತಾಗಿದೆ.24 ಗಂಟೆಗೂ ಮೊದಲು ಬೆಂಕಿ ಹಚ್ಚಿರೊ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ಮೃತದೇಹ ಪತ್ತೆಯಾದ ಜಾಗದಲ್ಲಿ ಸಿಕ್ಕ ಮದ್ಯದ ಬಾಟಲಿಗಳು,ಚಪ್ಪಲಿಗಳನ್ನೆಲ್ಲ ವಶಕ್ಕೆ ಪಡೆದಿರುವ ಕೆಂಗೇರಿ ಪೊಲೀಸರು ತನಿಖೆ ನಡೆಸ್ತಿದ್ದಾರೆ .
ಇನ್ನೂ ಮೃತದೇಹ ಸಿಕ್ಕ 50 ಮೀಟರ್ ದೂರದಲ್ಲಿ ಒಂದು ನಿರ್ಮಾಣ ಹಂತದ ಪಾಳು ಕಟ್ಟಡ ಇದ್ದು,ಅಲ್ಲಿಯೂ ಸುಟ್ಟ ಕುರುಹುಗಳು ಇದ್ದು ಇಲ್ಲಿ ಬೆಂಕಿ ಹಚ್ಚಿ ನಂತರ ಮರದ ಕೆಳಗೆ ಸುಟ್ಟಾಕಿರೊ ಅನುಮಾನ ಇದೆ. ಅಷ್ಟೇ ಅಲ್ಲ ಬೇರೆ ಕಡೆ ಕೊಲೆ ಮಾಡಿ ಇಲ್ಲಿ ತಂದು ನಿರ್ಜನ ಪ್ರದೇಶದಲ್ಲಿ ಬಿಸಾಡಿಹೋಗಿರುವ ಅನುಮಾನ ಕೂಡ ಇದೆ.ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!