ಸೇತುವೆ ಮೇಲಿಂದ ಉರುಳಿ ಬಿದ್ದ ಬಸ್‌, ಮಕ್ಕಳು ಸೇರಿದಂತೆ 21ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೀಕರ ಬಸ್‌ ಅಪಘಾತದಲ್ಲಿ 21 ಜನರು ಸಾವನ್ನಪ್ಪಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಮೀಥೇನ್‌ನಿಂದ ಚಲಿಸುತ್ತಿದ್ದ ಬಸ್ ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದು, ಬೆಂಕಿ ಹೊತ್ತಿಕೊಂಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಹಾಗೂ ವಿದೇಶಿಗರು ಸೇರಿದಂತೆ 21 ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.

ಮಂಗಳವಾರ ರಾತ್ರಿ 7:30ರ ಸುಮಾರಿಗೆ ಬಸ್ ವೆನಿಸ್‌ನ ಐತಿಹಾಸಿಕ ಕೇಂದ್ರದಿಂದ ಕ್ಯಾಂಪಿಂಗ್ ಸೈಟ್‌ಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ʻನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಿಂದ ನಾನು ದುಃಖಿತನಾಗಿದ್ದೇನೆʼ ಎಂದು ಮೇಯರ್ ಲುಯಿಗಿ ಬ್ರುಗ್ನಾರೊ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತದೇಹಗಳನ್ನು ಪತ್ತೆ ಹಚ್ಚಿ ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಸಾವನ್ನಪ್ಪಿದವರಲ್ಲಿ ಹಾಗೂ ಗಾಯಗೊಂಡವರಲ್ಲಿ ಇಟಾಲಿಯನ್ನರು ಮಾತ್ರವಲ್ಲದೆ ಅನೇಕ ದೇಶಗಳ ಜನರು ಇದ್ದಾರೆ.

ಈ ಘಟನೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಸ್ ವಿದ್ಯುತ್ ತಂತಿಗೆ ತಗುಲಿ ಅಪಘಾತ ಸಂಭವಿಸಿದೆ ಎಂದು ಇಟಲಿ ಅಧಿಕಾರಿಗಳು ಖಚಿತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!