Monday, March 4, 2024

ಯಲ್ಲಾಪುರದಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಬಸ್, ಚಾಲಕ ಸಾವು

ಹೊಸದಿಗಂತ ವರದಿ ಯಲ್ಲಾಪುರ :

ತಾಲೂಕಿನ ಅರಬೈಲ್‌ ಬಳಿ ಖಾಸಗಿ ಬಸ್‌ ಅಪಘಾತಕ್ಕೊಳಗಾಗಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಹೈದಾರಾಬಾದ್‌ ನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಸಿದ್ದ ಖಾಸಗಿ ಬಸ್‌ ರಾಷ್ಟ್ರೀಯ ಹೆದ್ದಾರಿ 52ರ ಅರಬೈಲ್‌ ಗ್ರಾಮದ ಮಾರುತಿ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದು, ಪರಿಣಾಮ ಚಾಲಕ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.

ಇನ್ನುಳಿದಂತೆ ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಹಲವರಿಗೆ ತೀವೃವಾದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ. ವಿ-ಕಾವೇರಿ ಟ್ರಾವೆಲ್ಸ್‌ ಗೆ ಸೇರಿದ ಸ್ಲೀಪರ್‌ ವೋಲ್ವೋ ಬಸ್‌ ಅಪಘಾತಗೊಂಡಿದ್ದು, ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!