ಗುರುಪುರ-ಕೈಕಂಬ ಪೊಳಲಿ ದ್ವಾರದ ಬಳಿ ಮಗುಚಿ ಬಿದ್ದ ಬಸ್: ಪ್ರಯಾಣಿಕರಿಗೆ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಕಟೀಲಿನಿಂದ ಬಿ.ಸಿ ರೋಡ್ ಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸು ಗುರುಪುರ-ಕೈಕಂಬ ಪೊಳಲಿ ದ್ವಾರದ ಬಳಿ ಮಗುಚಿ ಬಿದ್ದು 8 ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕಟೀಲಿನಿಂದ ಪೊಳಲಿ ಮೂಲಕ ಬಿ.ಸಿ.ರೋಡ್ ಗೆ ತೆರಳುತ್ತಿದ್ದ ಬಸ್ಸು ಪೊಳಲಿ ದ್ವಾರಕ್ಕಿಂತ ತುಸು ಮುಂದೆ ಇರುವ ಪ್ರಯಾಣಿಕರ ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ವೇಳೆ ಬಸ್ಸಿನ ಬ್ರೇಕ್ ವಿಫಲಗೊಂಡು ಬಸ್ಸು ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದ್ದು, ತಕ್ಷಣ ಎಚ್ಛೆತ್ತ ಚಾಲಕ ಬಸ್ಸನ್ನು ಬಲ ಬಾಗಕ್ಕೆ ತಿರುಗಿಸಿದ್ದು ರಸ್ತೆ ಪಕ್ಕದ ಗುಡ್ಡಕ್ಕೆ ಗುದ್ದಿ ಮಗುಚಿ ಬಿದ್ದಿದೆ ಪರಿಣಾಮ ಬಸ್ಸುನಲ್ಲಿದ್ದ 8 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಳಿಸಲಾಗಿದೆ.

ಒಂದು ವೇಳೆ ಬಸ್ಸು ಎಡ ಬದಿಗೆ ವಾಳುತ್ತಿದ್ದರೆ ಪ್ರಪಾತಕ್ಕೆ ಬಿದ್ದು ಭಾರೀ ಅನಾಹುತ ನಡೆಯುತ್ತಿತ್ತು.

ಘಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕ್ರೇನ್ ಮೂಲಕ ತೆರವು ಕಾರ್ಯಾಚರಣೆ ನಡೆಸಿ ಬಸ್ಸನ್ನು ರಸ್ತೆಯಿಂದ ತೆರವು ಮಾಡಲಾಗಿದೆ.ಬಜಪೆ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!